ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿ ಹಾಗೂ ಕೃಷಿ ಇಲಾಖೆಯಿಂದ ಜಂಟಿಯಾಗಿ ಕೃಷಿ ಭವನ ಪರಿಸರದಲ್ಲಿ ನಾಟಿ ಕೆಲಸ ಸಂತೆ ಹಾಗೂ ಕೃಷಿಕರ ಸಂಗಮ ನಡೆಲಾಗಿದೆ. ಪುತ್ತಿಗೆ ಪಂಚಾಯತಿ ಉಪಾಧ್ಯಕ್ಷ ಇ.ಕೆ. ಮುಹಮ್ಮದ್ ಕುಂಞÂ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಫಿದಾ ಊಜಂಪದವು ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಸಕೀನಾ ಶರೀಫ್, ಬ್ಲಾಕ್ ಸದಸ್ಯ ಜುನೈದ್ ಉರ್ಮಿ, ವಾರ್ಡ್ ಪ್ರತಿನಿಧಿಗಳಾದ ಎಸ್.ಎ. ಅಬ್ದುಲ್ಲ, ಬಾಲಕೃಷ್ಣ ರೈ, ಶಿವಪ್ಪ ರೈ, ಲಕ್ಷ್ಮಿ ವಿ. ಭಟ್, ಹಮೀದ್ ಬಾಡೂರು, ಜಯಂತಿ, ಪ್ರಗತಿಪರ ಕೃಷಿಕ ಶಿವಾನಂದ ಶುಭ ಹಾರೈಸಿದರು. ಕೃಷಿ ಅಧಿಕಾರಿ ದಿನೇಶ್ ಸ್ವಾಗತಿಸಿದರು. ಕೃಷಿಕರ ಉತ್ಪನ್ನಗಳು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಕೃಷಿಕ ಫ್ರಾನ್ಸಿಸ್ ಬಾಡೂರು 200 ರಷ್ಟು ಡ್ರಾಗನ್ ಪ್ರೂಟ್ ಕಟ್ಟಿಂಗ್ಸ್ ಉಚಿತವಾಗಿ ವಿತರಿಸಿದರು.

.jpg)
.jpg)
