ಕಾಸರಗೋಡು: ಕಾಸರಗೋಡಿನ ಉಳಿಯತಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ವಿಶೇಷ ವಿಕಲಚೇತನ ಶಾಲೆಗೆ ಕರ್ನಾಟಕ ಬ್ಯಾಂಕಿನ ವತಿಯಿಂದ ಶಾಲಾ ವಾಹನವನ್ನು ನೀಡಲಾಯಿತು. ಶಾಲೆಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷ ಎಸ್. ಜೆ ಪ್ರಸಾದ್ ಅವರಿಗೆ ಕರ್ನಾಟಕ ಬ್ಯಾಂಕ್ ನ ವಲಯ ಪ್ರಬಂಧಕ ಜಿ.ವಿಶ್ವನಾಥ್ ಅವರು ವಾಹನವನ್ನು ಹಸ್ತಾಂತರಿಸಿದರು.
ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಅಶೋಕ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಬ್ಯಾಂಕ್ ಪ್ರಬಂಧಕ ಅನಂತನ್, ರಬ್ಬರ್ ಬೋರ್ಡ್ ನಿವೃತ್ತ ಉಪ ಆಯುಕ್ತ ಬಾಲಕೃಷ್ಣ.ಎಸ್, ಕರ್ನಾಟಕ ಬ್ಯಾಂಕ್ ನ ಕಾಸರಗೋಡು ಶಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಉದಯಕುಮಾರ್ ಸ್ವಾಗತಿಸಿ, ಶಿಕ್ಷಕಿ ಚಿತ್ರ ವಂದಿಸಿದರು.

.jpg)
.jpg)
