HEALTH TIPS

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ವೈಯಕ್ತಿಕ ನಿರ್ಧಾರ: ಸ್ಟಾರ್ಮರ್

 ಲಂಡನ್‌: ಬ್ರಿಟನ್‌ ಪ್ರಧಾನ ಮಂತ್ರಿ ಸ್ಥಾನ ಹಾಗೂ ಲೇಬರ್‌ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವ ತಮ್ಮ ನಿರ್ಧಾರ 'ತೀರಾ ವೈಯಕ್ತಿಕವಾದದ್ದು' ಎಂದು ಕೀರ್‌ ಸ್ಟಾರ್ಮರ್‌ ಸ್ಪಷ್ಟಪಡಿಸಿದ್ದಾರೆ. 


ಭಾರಿ ಬಹುಮತದೊಂದಿಗೆ ಜಯ ಸಾಧಿಸಿ, ಬ್ರಿಟನ್‌ ಪ್ರಧಾನಿಯಾಗಿ 2024ರ ಜುಲೈ 5ರಂದು ಅಧಿಕಾರಕ್ಕೇರಿದ್ದ ಸ್ಟಾರ್ಮರ್‌, ಜೂನ್‌ 22ರಂದು ರಾಜೀನಾಮೆ ನಿರ್ಧಾರ ಘೋಷಿಸಿದ್ದರು.

ಅದಾದ ನಂತರ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿರಲಿಲ್ಲ. ಆದರೆ, ಬಿಬಿಸಿ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡ ವೇಳೆ, ಸಂಸತ್‌ ಸದಸ್ಯರಾಗಿ ಅವಧಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

'ನನಗಾಗಿ, ದೇಶಕ್ಕಾಗಿ ಹಾಗೂ ಸರ್ಕಾರಕ್ಕಾಗಿ ಯಾವ ನಿರ್ಧಾರ ಮಾಡುವುದು ಉತ್ತಮ ಎಂದು ಯೋಚಿಸಿದ್ದೆ. ಅಂತಿಮವಾಗಿ, ರಾಜೀನಾಮೆ ತೀರ್ಮಾನ ಮಾಡಿದೆ. ಅದು, ಸಂಪೂರ್ಣ ವೈಯಕ್ತಿವಾದದ್ದು' ಎಂದು ತಿಳಿಸಿದ್ದಾರೆ.

ಜೂನ್‌ 22ರಂದು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಮಾತನಾಡಿದ್ದ ಸ್ಟಾರ್ಮರ್‌, 'ನಾನು ಪ್ರೀತಿಸುವ ದೇಶವನ್ನು ಮುಂಚೂಣಿಗೆ ತರುವ ಉದ್ದೇಶದ ಸಲುವಾಗಿಯೇ ಪ್ರತಿಯೊಂದು ನಿರ್ಧಾರವನ್ನೂ ಕೈಗೊಂಡಿದ್ದೆ. ಅದೇ ಕಾರಣಕ್ಕಾಗಿ ಇದೀಗ ರಾಜೀನಾಮೆ ನೀಡಲಿದ್ದೇನೆ' ಎಂದು ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಸ್ಟಾರ್ಮರ್‌ ಜನಪ್ರಿಯತೆ ಕುಸಿದಿತ್ತು. ಲೇಬರ್ ಪಕ್ಷದ ನಾಯಕತ್ವಕ್ಕಾಗಿ ಪ್ರಧಾನಿಗೆ ಸವಾಲೊಡ್ಡಿದ್ದ ಗ್ರೇಟರ್‌ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್‌ ಆಯಂಡಿ ಬರ್ನ್‌ಹ್ಯಾಮ್‌, ಜೂನ್‌ ಮಧ್ಯದಲ್ಲಿ ನಡೆದ ವಿಶೇಷ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದರು. ಅದು, ಸ್ಟಾರ್ಮರ್‌ ರಾಜೀನಾಮೆ ನಿರ್ಧಾರಕ್ಕೆ ಉತ್ತೇಜನ ನೀಡಿತ್ತು.

ಲೇಬರ್‌ ಪಕ್ಷದ ನೂತನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯು ಜುಲೈ 9ರಂದು ಆರಂಭವಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಉತ್ತರಾಧಿಕಾರಿ ಆಯ್ಕೆಯಾಗುವವರೆಗೆ ಪ್ರಧಾನಿಯಾಗಿ ಮುಂದುವರಿಯುವೆ ಎಂದು ಸ್ಟಾರ್ಮರ್‌ ಈಗಾಗಲೇ ತಿಳಿಸಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries