HEALTH TIPS

ಯೂಸರ್ ನೇಮ್ ಮೂಲಕ ವಾಟ್ಸ್‌ಆಯಪ್ ಬಳಕೆ ಫೀಚರ್‌ ತಡೆಗೆ ಮೆಟಾಗೆ ಕೇಂದ್ರಸರ್ಕಾರ ಆದೇಶ

 ನವದೆಹಲಿ: ಮೊಬೈಲ್ ಸಂಖ್ಯೆ ಇಲ್ಲದೇ ಯೂಸರ್ ನೇಮ್ ಮೂಲಕ ವಾಟ್ಸ್‌ಆಯಪ್ ಬಳಕೆಗೆ ಅನುವು ಮಾಡಿಕೊಡುವ ವೈಶಿಷ್ಟ ಪರಿಚಯಿಸಲು ಮುಂದಾಗಿದ್ದ ಮೆಟಾಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಈ ಕುರಿತಾದ ಗೋಪ್ಯತೆ ಮತ್ತು ಭದ್ರತಾ ಪರಿಣಾಮಗಳ ಕುರಿತು ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಪ್ರಸ್ತಾಪಿತ ವೈಶಿಷ್ಟ್ಯವನ್ನು ಭಾರತದಲ್ಲಿ ಆರಂಭಿಸದಂತೆ ಮೆಟಾಗೆ ಕೇಂದ್ರ ಸರ್ಕಾರ ಆದೇಶಿಸಿದೆ. 


ಈ ಕುರಿತಂತೆ ಮೆಟಾಗೆ ನೋಟಿಸ್ ನೀಡಿರುವ ಸರ್ಕಾರವು 3 ದಿನಗಳಲ್ಲಿ ವಿವರಣೆ ಸಲ್ಲಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮೆಟಾ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ಮೊಬೈಲ್ ನಂಬರ್ ಇಲ್ಲದೇ ಯೂಸರ್ ನೇಮ್ ಬಳಸಿಕೊಂಡು ವಾಟ್ಸ್‌ಆಯಪ್ ಬಳಸಬಹುದಾದ ಮೆಟಾದ ಉದ್ದೇಶಿತ ಫೀಚರ್ ವಿಷಯದಲ್ಲಿ ಸರ್ಕಾರದ ಮೊದಲ ಅಧಿಕೃತ ಮಧ್ಯಪ್ರವೇಶ ಇದಾಗಿದೆ.

ಸೈಬರ್ ಕ್ರಿಮಿನಲ್‌ಗಳಿಂದ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಈ ಫೀಚರ್ ಸೂಕ್ತವಾಗಿದೆಯೇ ಮತ್ತು ಇದರಿಂದಾಗಿ ವಂಚಕರ ಪತ್ತೆ ಕಷ್ಟವಾಗಬಹುದೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ವೈಶಿಷ್ಟ್ಯವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಲು ಸರ್ಕಾರವು ಮೆಟಾವನ್ನು ಕೇಳಿದೆ. ಬಳಕೆದಾರರನ್ನು ವೆರಿಫೈ ಮಾಡಲು ಯಾವ ಕಾರ್ಯವಿಧಾನಗಳನ್ನು ಬಳಸಲಾಗಿದೆ. ಅನ್ಯರ ಸೋಗಿನಲ್ಲಿ ನಡೆಯುವ ವಂಚನೆ, ಆನ್‌ಲೈನ್ ವಂಚನೆ ಮತ್ತು ಇತರ ರೀತಿಯ ದುರುಪಯೋಗವನ್ನು ತಡೆಯಲು ಕಂಪನಿಯು ಯಾವ ಯೋಜನೆ ಮಾಡಿದೆ. ಸದ್ಯ ಸರ್ಕಾರದ ಕಡೆಯಿಂದ ನಡೆಯುತ್ತಿರುವ ಪರಿಶೀಲನೆ ಮತ್ತು ಸಮಾಲೋಚನೆಗಳು ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ಪ್ರಾರಂಭಿಸಬೇಡಿ ಎಂದು ಕಂಪನಿಗೆ ತಿಳಿಸಲಾಗಿದೆ.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳುವ ಬದಲು ವಿಶಿಷ್ಟ ಯೂಸರ್ ನೇಮ್ ಬಳಸಲು ಅವಕಾಶ ನೀಡುವ ಮೂಲಕ ವಾಟ್ಸ್‌ಆಯಪ್ ತನ್ನ ಅತಿದೊಡ್ಡ ಗೋಪ್ಯತೆ ಬದಲಾವಣೆಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ ಸರ್ಕಾರದಿಂದ ಆಕ್ಷೇಪಣೆ ಬಂದಿದೆ.

ಬಳಕೆದಾರರಿಗೆ ಹೆಚ್ಚಿನ ಗೋಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ಮೇಲೆ ನಿಯಂತ್ರಣ ನೀಡುವ ಉದ್ದೇಶವನ್ನು ಈ ವೈಶಿಷ್ಟ್ಯ ಹೊಂದಿದೆ ಎಂದು ಮೆಟಾ ಹೇಳಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries