ಕಾಸರಗೋಡು: ಕೆಲವು ತಿಂಗಳ ಹಿಂದೆ ಮಲಬಾರ್ ಪ್ರದೇಶದ ಪ್ರಮುಖ ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲು ಪ್ರಾರಂಭಿಸಿದ ಮಂಗಳೂರು-ರಾಮೇಶ್ವರಂ ಎಕ್ಸ್‍ಪ್ರೆಸ್ ರೈಲು ಜನದಟ್ಟಣೆಯಿಂದ ಕೂಡಿದೆ. ಇದರೊಂದಿಗೆ, ಈ ಸೇವೆಯನ್ನು ಪ್ರತಿದಿನ ಮಾಡಬೇಕೆಂಬ ಬೇಡಿಕೆಯೂ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 1 ರಂದು ಹೊಸ ರೈಲು ಸೇವೆಯನ್ನು ಉದ್ಘಾಟಿಸಿದ್ದರು. ಎರಡು ವಾರಗಳ ನಂತರ, ಮಾರ್ಚ್ 14 ರಂದು ನಿಯಮಿತ ಸೇವೆಯನ್ನು ಪ್ರಾರಂಭಿಸಲಾಯಿತು. ಹೆಚ್ಚಿನ ದೂರದ ಪ್ರಯಾಣಿಕರು ಪಳನಿ ಮುರುಗನ್ ಕೋವಿಲ್, ಮಧುರೈ ಮೀನಾಕ್ಷಿ ದೇವಸ್ಥಾನ, ಯರವಾಡಿ ದರ್ಗಾ ಮತ್ತು ರಾಮೇಶ್ವರಂಗೆ ತೆರಳುವವರು. ಮಂಗಳೂರು-ರಾಮೇಶ್ವರಂ ಎಕ್ಸ್‍ಪ್ರೆಸ್ ಈಗಾಗಲೇ 100 ಪ್ರತಿಶತ ವೈಟಿಂಗ್ ಲೀಸ್ಟ್ ನಂತೆ ಸಂಚರಿಸುವ ರೈಲಾಗಿ ಮಾರ್ಪಟ್ಟಿದೆ. ಇದು ಮಲಬಾರ್‍ನಿಂದ ಬರುವ ಏಕೈಕ ಸೇವೆಯಾಗಿರುವುದರಿಂದ, ಭಾರಿ ಬೇಡಿಕೆಯಿದೆ. ಈ ರೈಲಿನಲ್ಲಿ ಬರ್ತ್ ಬುಕ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ, ಅದನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸುವ ಸಂದೇಶ ಬರಲು ಪ್ರಾರಂಭಿಸಿದೆ. ರಿಸರ್ವೇಶನ್(ಕಾಯ್ದಿರಿಸುವಿಕೆ) ಗೆ ಪ್ರಯತ್ನಿಸುವವರಿಗೆ ಟಿಕೆಟ್ ಲಭಿಸುವುದು ದರ್ಲಭವಾಗಿದೆ. ಇದು ಹೆಚ್ಚಿನ ಬೇಡಿಕೆಯನ್ನು ಸೂ
ಚಿಸುತ್ತದೆ.
ಈ ಸಾಪ್ತಾಹಿಕ ಎಕ್ಸ್‍ಪ್ರೆಸ್ ಮಂಗಳೂರು ಕೋಚಿಂಗ್ ಡಿಪೋದಲ್ಲಿ ಐದು ದಿನಗಳ ಕಾಲ ನಿಷ್ಕ್ರಿಯವಾಗಿದ್ದು, ಆರಂಭದಲ್ಲಿದು ವಾರಕ್ಕೆ ಒಂದು ದಿನ ಮಾತ್ರ ಸಂಚರಿಸುತ್ತಿತ್ತು. ಇದನ್ನು ಮೂರು ದಿನಗಳ ಸೇವೆಯಾಗಿ ಬದಲಿಸಿ ಕ್ರಮೇಣ ಇದನ್ನು ದೈನಂದಿನ ಸೇವೆಯನ್ನಾಗಿ ಮಾಡಬೇಕಾಗಿದೆ.
ಹೆಚ್ಚುತ್ತಿರುವ ಬೇಡಿಕೆಯನ್ನು ರೈಲ್ವೆ ಗಣನೆಗೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಇಪ್ಪತ್ತು ಬೋಗಿಗಳು ಈ ರೈಲಲ್ಲಿ ಲಭ್ಯವಿರಲಿದೆ. ಈ ತಿಂಗಳ 4 ರಿಂದ ಎರಡು ಬೋಗಿ ಸೇರ್ಪಡೆಗೊಳಿಸಿ 22 ಕಂಪಾರ್ಟ್‍ಮೆಂಟ್‍ಗಳೊಂದಿಗೆ ಈ ರೈಲು ಸಂಚಾರಕ್ಕೆ ನಿರ್ಧರಿಸಲಾಗಿದೆ. ಎರಡು ಮೂರು ಹಂತದ ಎಸಿ ಕೋಚ್‍ಗಳನ್ನು ಒಂದೇ ಘಟಕವಾಗಿ ಸೇರಿಸಲಾಗುವುದು.
ಏತನ್ಮಧ್ಯೆ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳೂರು ಸೆಂಟ್ರಲ್ ರಾಮೇಶ್ವರಂ ವೀಕೆಂಡ್ ಎಕ್ಸ್‍ಪ್ರೆಸ್‍ನ ಹೊಸ ಎಲ್‍ಎಚ್‍ಬಿ ರೇಕ್‍ನ ಖಾಲಿ ರೇಕ್ ಅನ್ನು ವಾರಕ್ಕೆ ಐದು ರಾತ್ರಿಗಳ ಕಾಲ ಜನರಿಗೆ ಅನುಕೂಲವಾಗುವಂತೆ ಬಳಸಬೇಕೆಂದು ರೈಲ್ವೆ ಸಚಿವಾಲಯವನ್ನು ಒತ್ತಾಯಿಸಿದ್ದಾರೆ. ಖಾಲಿ ಇರುವ ರೇಕ್ ಬಳಸಿ ಹೆಚ್ಚುವರಿ ಸೇವೆಗಳನ್ನು ನಡೆಸುವಂತೆ ಅವರು ರೈಲ್ವೆ ಸಚಿವಾಲಯವನ್ನು ವಿನಂತಿಸಿದ್ದಾರೆ. ಇದು ಈ ಪ್ರದೇಶದ ಜನರಿಗೆ ರೈಲು ಸೌಲಭ್ಯಗಳನ್ನು ಸುಧಾರಿಸುತ್ತದೆ ಎಂದು ಕ್ಯಾಪ್ಟನ್ ಚೌಟ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬಂದರ್ ಹಳೆಯ ಸರಕುಗಳ ವೇಳಾಪಟ್ಟಿಯ ಪ್ರಕಾರ ಈ ರೇಕ್ ಕೆಲವು ದಿನಗಳಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಥವಾ ಮಂಜೇಶ್ವರ ಅಥವಾ ನೀಲೇಶ್ವರದಲ್ಲಿ ನಿಲ್ಲುತ್ತದೆ. ರೈಲು ಸಂಖ್ಯೆ 16621 ಪ್ರತಿ ಭಾನುವಾರ ಮಧ್ಯಾಹ್ನ 3.30 ಕ್ಕೆ ರಾಮೇಶ್ವರಂನಿಂದ ಹೊರಟು ಮರುದಿನ ಸಂಜೆ 6.55 ಕ್ಕೆ ಮಾಮಗಳೂರು ಸೆಂಟ್ರಲ್ ತಲುಪುತ್ತದೆ. ಅದರ ನಂತರ, ವಾರದಲ್ಲಿ ಗಣನೀಯ ಸಮಯದವರೆಗೆ ರೇಕ್ ನಿಷ್ಕ್ರಿಯವಾಗಿರುತ್ತದೆ ಮತ್ತು ಪ್ರತಿ ಶನಿವಾರ ಬೆಳಿಗ್ಗೆ 7.30 ಕ್ಕೆ ರಾಮೇಶ್ವರಂ ತಲುಪುತ್ತದೆ.
ಮಲಬಾರ್‍ನ ಜನರು ಹಳೆಯ ರೈಲುಗಳಲ್ಲಿ ಪಳನಿ ಮತ್ತು ಮಧುರೈ ಇತ್ಯಾದಿಗಳಿಗೆ ಪ್ರಯಾಣಿಸುತ್ತಿದ್ದರು. ಪಾಲಕ್ಕಾಡ್ ಜಂಕ್ಷನ್ ಆಗಿ ಮಾರ್ಪಟ್ಟ ಒಲವಕ್ಕೋಡಿಯ ಸುವರ್ಣ ದಿನಗಳಲ್ಲಿ, ಮೀಟರ್ ಗೇಜ್ ರೈಲುಗಳು ಪೊಳ್ಳಾಚಿ ಮೂಲಕ ಹಗಲು ರಾತ್ರಿ ಸಂಚರಿಸುತ್ತಿದ್ದವು. ಪಾಲಕ್ಕಾಡ್-ಪೊಳ್ಳಾಚಿ ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದಾಗ, ಹಲವು ವರ್ಷಗಳ ಕಾಲ ಈ ಮಾರ್ಗದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆಧುನೀಕರಣ ಪೂರ್ಣಗೊಂಡ ನಂತರವೂ, ಕೇರಳದ ಉತ್ತರ ಜಿಲ್ಲೆಗಳು ಅದರ ಪ್ರಯೋಜನಗಳನ್ನು ಪಡೆಯಲಿಲ್ಲ.
2015 ರಲ್ಲಿ ಗೇಜ್ ಪರಿವರ್ತನೆ ಪೂರ್ಣಗೊಂಡಾಗಿನಿಂದ ರೈಲ್ವೆ ಮಂಡಳಿಯು ಮಂಗಳೂರಿನಿಂದ ರಾಮೇಶ್ವರಂಗೆ ರೈಲು ಸೇವೆಯನ್ನು ಶಿಫಾರಸು ಮಾಡುತ್ತಿದೆ. ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಜನರಿಗೆ ಈ ಮಾರ್ಗವು ತುಂಬಾ ಉಪಯುಕ್ತವಾಗಿದೆ. ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣವಾದ ಮಧುರೈ ಮತ್ತು ಕೊಡೈಕನಾಲ್‍ನಲ್ಲಿರುವ ಪ್ರಸಿದ್ಧ ಕಣ್ಣಿನ ಚಿಕಿತ್ಸಾ ಕೇಂದ್ರಕ್ಕೆ ಪ್ರಯಾಣಿಸುವವರು ಸಹ ಈ ಮಾರ್ಗವನ್ನು ಬಳಸುತ್ತಿದ್ದರು.

