ಅಯೋಧ್ಯೆ: ರಾಮ ಮಂದಿರವು ದೇಣಿಗೆ ವಿವಾದದ ಬೆನ್ನಲ್ಲೇ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ-ಲೇಪಿತ ರಾಮಚರಿತ ಮಾನಸವನ್ನು (Rama Charit Manas) ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಕುಟುಂಬವು ದೇವಾಲಯಕ್ಕೆ ದಾನ ಮಾಡಿತ್ತು. ಆ ರಾಮಚರಿತ ಮಾನಸ ಈಗ ನಾಪತ್ತೆಯಾಗಿದೆ ಎಂದು ಲಕ್ಷ್ಮಿನಾರಾಯಣನ್ ಹೇಳಿದ್ದರು.
ಇದೀಗ ಆ ವದಂತಿಗೆ ಸ್ಪಷ್ಟನೆ ಸಿಕ್ಕದೆ. ವಿಶ್ವ ಹಿಂದೂ ಪರಿಷತ್ ನ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಮಮಂದಿರ ನಿರ್ಮಾಣದ ಉಸ್ತುವಾರಿಗಳಲ್ಲಿ ಪ್ರಮುಖರಾಗಿದ್ದ ಗೋಪಾಲ ನಾಗರಕಟ್ಟೆ ಅವರು ಚಿನ್ನ-ಲೇಪಿತ ರಾಮಚರಿತ ಮಾನಸ ಪುಸ್ತಕದ ಫೋಟೋವನ್ನು ಹಂಚಿಕೊಂಡು ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಮಾಜಿ ಅಧಿಕಾರಿಯ ಪ್ರಕಾರ, ಅವರ ಕುಟುಂಬವು ಏಪ್ರಿಲ್ 2024ರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಚಿನ್ನ-ಲೇಪಿತ ರಾಮಚರಿತ ಮಾನಸವನ್ನು ಅರ್ಪಿಸಿತ್ತು. ಧಾರ್ಮಿಕ ಪಠ್ಯವು ನಂತರ ದೇವಾಲಯದಿಂದ ಕಣ್ಮರೆಯಾಗಿದೆ ಎಂದು ಅವರು ಹೇಳಿಕೊಂಡಿದ್ದರು. ದೇವಾಲಯದಲ್ಲಿ ಸ್ವೀಕರಿಸಿದ ಪ್ರತಿಯೊಂದು ದೇಣಿಗೆಯನ್ನು ಶಾಶ್ವತವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಹೇಳಿದ್ದರು ಎಂದು ಅವರು ಹೇಳಿದ್ದಾರೆ.

