HEALTH TIPS

ಜಿಲ್ಲಾ ಪಂಚಾಯತಿ ಸದಸ್ಯನ ಹೆಸರು ಶಾಲಾ ಶಿಲಾಫಲಕದಿಂದ ಅಳಿಸಿದ ಪ್ರಕರಣ: ಅಂಗಡಿಮೊಗರುನಲ್ಲಿ ವಿಶಿಷ್ಟ ವಿದ್ಯಮಾನ-ಭಾರೀ ವಿಮರ್ಶೆ

ಕುಂಬಳೆ: ಜಿಲ್ಲಾ ಪಂಚಾಯತಿ ಸದಸ್ಯನ ಹೆಸರನ್ನು ಸರ್ಕಾರಿ ಕಾರ್ಯಕ್ರಮದ ಶಿಲಾಫಲಕದಿಂದ ಅಳಿಸಲಾಗಿದೆ ಎಂದು ದೂರಲಾಗಿದೆ. ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ಉದ್ಘಾಟನೆ ಶಿಲಾಫಲಕದಿಂದ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಅವರ ಹೆಸರನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಅಳಿಸಿ ಹಾಕಲಾಗಿದೆ. ಫಲಕದಲ್ಲಿನ ಇನ್ಯಾ ರದೇ ಹೆಸರಿಗೆ ಯಾವುದೇ ಹಾನಿ ಉಂಟಾಗದಂತೆ ಸೋಮಶೇಖರರ ಹೆಸರನ್ನು ಅಳಿಸಿರುವುದು ಕಂಡುಬಮದಿದೆ. ಕಾಸರಗೋಡು ಪ್ಯಾಕೇಜ್‍ನಲ್ಲಿ ಒಳಪಡಿಸಿ ಸರ್ಕಾರದ ನಿಧಿ ಉಪಯೋಗಿಸಿ ನಿರ್ಮಿಸಿದ ಕಟ್ಟಡದ ಉದ್ಘಾಟನಾ ಫಲಕದಿಂದ ಹೆಸರನ್ನು ಅಳಿಸಿಹಾಕಲಾಗಿದೆ. 


ಶಾಲಾ ಅಂಗಣದಲ್ಲಿ ಸ್ಥಾಪಿಸಿದ ಶಿಲಾಫಲಕದಿಂದ ಸೋಮಶೇಖರ್ ಜೆ.ಎಸ್.ರ ಹೆಸರನ್ನು ಮಾತ್ರವೇ ಅಳಿಸಿರುವುದು ಕಾಕತಾಳೀಯ ಎಂದು ತಿಳಿಯಲು ಸಾಧ್ಯವಿಲ್ಲ. ಈ ಘಟನೆ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಸಂದರ್ಭದಲ್ಲಿ ನಡೆಯಬಾರದ ಘಟನೆ ಎಂದು ಸೋಮಶೇಖರ ಶಾಲೆಯ ಪ್ರಾಂಶುಪಾಲರಲ್ಲಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ಘನತೆಯ ಉಲ್ಲಂಘನೆಯಾಗಿದೆ ಇದು ಎಂದು,  ಶಾಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಜೊತೆಯಾಗಿ ಮುನ್ನಡೆಯುತ್ತಿರುವಾಗ ಈ ರೀತಿಯ ಘಟನೆಗಳು ಸಂಭವಿಸುತ್ತಿರುವುದು ಶಾಲೆಯ ಶಾಂತಿ ಸುವ್ಯವಸ್ಥೆ ಹಾಗೂ ಅಭಿವೃದ್ಧಿಯನ್ನು ಬುಡಮೇಲುಗೊಳಿಸಲಿರುವ ನಿಗೂಢ ತಂತ್ರವೆಂದು ಅವರು ಆರೋಪಿಸಿದರು. ಈ ಸಮಸ್ಯೆಯಲ್ಲಿ ಶಾಲಾ ಅಧಿಕಾರಿಗಳು, ಪಿಟಿಎ ಕೂಡಲೇ ಮಧ್ಯೆಪ್ರವೇಶಿಸಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಪರವಾದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ಆ ಫಲಕದಲ್ಲಿ ತನ್ನ ಹೆಸರನ್ನು ತುರ್ತಾಗಿ ಪೂರ್ವಸ್ಥಿತಿಯಲ್ಲೇ ಸ್ಥಾಪಿಸಬೇಕೆಂದು ಪ್ರಾಂಶುಪಾಲ, ಮುಖ್ಯೋಪಾಧ್ಯಾಯರಲ್ಲಿ ಅವರು ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries