ಕೋಲ್ಕತ್ತ (PTI): ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ಯಾವುದೇ ವಿಚಾರಣೆ ಇಲ್ಲದೆಯೇ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಕ್ತಿಯನ್ನು 12 ತಿಂಗಳವರೆಗೆ ಬಂಧಿಸುವ ಅವಕಾಶ ಇರುವ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ಅಂಗೀಕರಿಸಿತು.
'ಪಶ್ಚಿಮ ಬಂಗಾಳ ಸಾರ್ವಜನಿಕ ಸುರಕ್ಷತೆ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ನಿಯಂತ್ರಣ ಮಸೂದೆ, 2026' ಅನ್ನು ಮತಕ್ಕೆ ಹಾಕಲಾಗಿತ್ತು.
176 ಶಾಸಕರು ಮಸೂದೆ ಪರ ಮತ ಹಾಕಿದರು. 42 ಶಾಸಕರು ಮಸೂದೆಯನ್ನು ವಿರೋಧಿಸಿ ಮತ ಹಾಕಿದರೆ, 20 ಶಾಸಕರು ಗೈರಾಗಿದ್ದರು.
'ಗಲಭೆಯನ್ನು ತಡೆಗಟ್ಟುವುದು ಈ ಮಸೂದೆ ಉದ್ದೇಶ. ಯಾವುದೇ ಕಾರಣಕ್ಕೂ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ' ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಚರ್ಚೆಯ ವೇಳೆ ಹೇಳಿದರು.

