ಕಾಸರಗೋಡು: ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ವಿಭಾಗವು ಐಸಿಎಸ್‍ಎಸ್‍ಆರ್ (ICSSR) ಸಹಯೋಗದೊಂದಿಗೆ ಆಯೋಜಿಸಿರುವ 'ಜಿಎಸ್‍ಟಿ ಸುಧಾರಣೆ ಮತ್ತು ಸಾಮಾಜಿಕ-ಆರ್ಥಿಕ ಪರಿಣಾಮಗಳು' ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಕ್ಯಾಂಪಸ್‍ನಲ್ಲಿ ಆರಂಭಗೊಂಡಿದೆ.
ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಎಸ್‍ಟಿ ಸುಧಾರಣೆಯಿಂದ ದೇಶದ ಬೆಳವಣಿಗೆಯಲ್ಲಿ ವೇಗಪಡೆದುಕೊಳ್ಳಲು ಸಾಧ್ಯವಾಗಿದೆ. ಸರಕು ಮತ್ತು ಸೇವಾ ತೆರಿಗೆಯು ದೇಶದ ಜಿಡಿಪಿ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದರ ಜತೆಗೆ ತೆರಿಗೆ ಆದಾಯದಲ್ಲಿ ಗಣನೀಯ ಏರಿಕೆಗೆ ಕಾರಣವಾಗಿರುವುದಾಗಿ ತಿಳಿಸಿದರು.
ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪೆÇ್ರ. ಬಿನೋಯ್ ಟಿ.ಎ. ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ರಾಷ್ಟ್ರೀಯ ಸಂಸ್ಥೆ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿಯ ಪ್ರಾಧ್ಯಾಪಕ ಡಾ. ಸಚ್ಚಿದಾನಂದ ಮುಖರ್ಜಿ ಮುಖ್ಯ ಭಾಷಣ ಮಾಡಿದರು. ಪ್ರಭಾರ ಕುಲಸಚಿವ ಪೆÇ್ರ. ವಿ.ಬಿ. ಸಮೀರ್ ಕುಮಾರ್, ಪ್ರಭಾರ ಹಣಕಾಸು ಅಧಿಕಾರಿ ಡಾ. ಮಿನಿಮೋಲ್ ಎಂ.ಸಿ. ಮತ್ತು ಪ್ರಭಾರ ಡೀನ್ (ಶೈಕ್ಷಣಿಕ) ಪೆÇ್ರ. ಎ.ವಿ. ಸಿಜಿನ್ ಕುಮಾರ್ ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಮುಖ್ಯಸ್ಥ ಪೆÇ್ರ. ಸಾಜಿ ಟಿ.ಜಿ. ಅವರು ಸ್ವಾಗತಿಸಿದರು. ಸಮ್ಮೇಳನದ ಕಾರ್ಯದರ್ಶಿ ಡಾ. ಕೆ.ಶ್ರವಣ ವಂದಿಸಿದರು. ದೇಶದ ವಿವಿಧೆಡೆಯಿಂದ ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಭಾಗವಹಿಸಿರುವ ಈ ಸಮ್ಮೇಳನ ಜು.24ರಂದು ಸಂಪನ್ನಗೊಳ್ಳಲಿದೆ.



