ನವದೆಹಲಿ (PTI): ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ವಿಚಾರವಾಗಿ ವಿಧಿಸಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಬುಧವಾರದಿಂದ ಅನ್ವಯವಾಗುವಂತೆ ತೆರವು ಮಾಡಲಿದೆ.
ಒಂದು ವಾಹನಕ್ಕೆ ಒಂದು ದಿನದಲ್ಲಿ ಭರ್ತಿ ಮಾಡಬಹುದಾದ ಡೀಸೆಲ್ ಮಿತಿಯನ್ನು ಕೂಡ ತೆರವುಗೊಳಿಸಲಾಗುತ್ತದೆ.
ಇದು ಇಂಧನ ಪೂರೈಕೆ ಸುಧಾರಣೆ ಕಂಡಿದೆ ಎಂಬುದನ್ನು ಸೂಚಿಸುತ್ತಿದೆ.
ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸ್ಥಳೀಯ ಮಟ್ಟದಲ್ಲಿ ಇಂಧನ ಕೊರತೆ ಎದುರಾಗಬಾರದು ಎಂಬ ಉದ್ದೇಶದಿಂದ ಕೇಂದ್ರವು ಈ ನಿರ್ಬಂಧಗಳನ್ನು ಜಾರಿಗೆ ತಂದಿತ್ತು.

