HEALTH TIPS

ಜುಡೋ ತಾರೆ ತುಲಿಕಾ ಮಾನ್‌ಗೆ ನಾಡಾ ನಿಷೇಧ; ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದಕ್ಕೆ

ಗ್ಲಾಸ್ಗೊ: ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಜುಡೋ ತಾರೆ ತುಲಿಕಾ ಮಾನ್ ಅವರನ್ನು ಕಳೆದ 12 ತಿಂಗಳಲ್ಲಿ ಮೂರು ಬಾರಿ ಡೋಪಿಂಗ್ ಟೆಸ್ಟ್‌ಗೆ ಹಾಜರಾಗುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ(ನಾಡಾ)ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಹೀಗಾಗಿ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. 


ಮಾನ್ ಹಿಂದೆ ಸರಿದ ಕಾರಣ ಭಾರತದ ಕಾಮನ್‌ವೆಲ್ತ್ ಗೇಮ್ಸ್ ಅಭಿಯಾನದಲ್ಲಿ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.

2022ರ ಆವೃತ್ತಿಯ ಕ್ರೀಡಾಕೂಟದಲ್ಲಿ ಮಾನ್ ಅವರು +78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಗ್ಲಾಸ್ಗೊ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಸ್ಪರ್ಧಿಯಾಗಿದ್ದರು.

''12 ತಿಂಗಳ ಅವಧಿಯಲ್ಲಿ ಮೂರು ಬಾರಿ ಮಾನ್ ಅವರು ಡೋಪಿಂಗ್ ಪರೀಕ್ಷೆಗೆ ಹಾಜರಾಗುವಲ್ಲಿ ವಿಫಲರಾಗಿದ್ದಾರೆ. ನಾಡಾ, ಮಾನ್ ಅವರಿಗೆ ನೋಟಿಸ್ ಅನ್ನು ಕಳುಹಿಸಿದೆ. ಹೀಗಾಗಿ ಅವರು ತಂಡದಿಂದ ಹಿಂದೆ ಸರಿದಿದ್ದಾರೆ'' ಎಂದು ಜುಡೋ ಕೋಚ್ ಪಿಟಿಐಗೆ ತಿಳಿಸಿದ್ದಾರೆ.

ಇನ್ನೋರ್ವ ಜುಡೋ ಸ್ಟಾರ್ ಅರುಣ್ ಕುಮಾರ್(-73ಕೆಜಿ)ಕೂಡ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ಕೊನೆಯ ಕ್ಷಣದಲ್ಲಿ ಗೇಮ್ಸ್‌ನಿಂದ ಹೊರಗುಳಿದಿದ್ದರು.

ಭಾರತೀಯ ಜುಡೋ ತಂಡವು ಕ್ರೀಡಾಕೂಟಕ್ಕಾಗಿ ಜುಲೈ 27ರಂದು ಗ್ಲಾಸ್ಗೋಗೆ ತೆರಳಲಿದೆ. ಜುಡೋ ಸ್ಪರ್ಧಾವಳಿಯು ಜುಲೈ 31ರಂದು ಆರಂಭವಾಗಲಿದೆ.

ಇಬ್ಬರು ಜುಡೋ ಪಟುಗಳು ಗೇಮ್ಸ್‌ನಿಂದ ಹಿಂದೆ ಸರಿದ ಕಾರಣ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಒಟ್ಟು ಕ್ರೀಡಾಪಟುಗಳ ಸಂಖ್ಯೆಯು 123ಕ್ಕೆ ಇಳಿದಿದೆ.

27ರ ವಯಸ್ಸಿನ ಮಾನ್ ಕಳೆದೊಂದು ದಶಕದಿಂದ ಭಾರತೀಯ ಜುಡೋದ ಪ್ರಮುಖ ಸದಸ್ಯರಾಗಿದ್ದಾರೆ. ಎಳೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಮಾನ್ ಅವರು ತನ್ನ ತಾಯಿ, ದಿಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಮೃತಾ ನೆರಳಲ್ಲಿ ಬೆಳೆದರು. ತನ್ನ ಎಂಟನೇ ವಯಸ್ಸಿನಲ್ಲಿ ಫುಟ್ಬಾಲ್‌ನಿಂದ ಜುಡೋಗೆ ಆಸಕ್ತಿ ತೋರಿಸಿದ ತುಲಿಕಾ ಕೋಚ್ ಯಶ್ಪಾಲ್ ಸೋಲಂಕಿ ಮಾರ್ಗದರ್ಶನದಲ್ಲಿ ಹಂತ ಹಂತವಾಗಿ ಬೆಳೆದರು.

2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ +78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮಾನ್ ಎಲ್ಲರ ಗಮನ ಸೆಳೆದಿದ್ದರು. ಈ ಸಾಧನೆ ಮಾಡಿದ ಭಾರತದ ಎರಡನೇ ಜುಡೋ ಪಟು ಎನಿಸಿಕೊಂಡಿದ್ದರು.ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಮಾನ್ ಅವರು ದೇಶವನ್ನು ಪ್ರತಿನಿಧಿಸಿದ್ದ ಏಕೈಕ ಜುಡೋ ಪಟು ಎನಿಸಿಕೊಂಡಿದ್ದರು.

ತಾತ್ಕಾಲಿಕ ಅಮಾನತು ಇದೀಗ ಮಾನ್ ಅವರ ವೃತ್ತಿಜೀವನದ ಮೇಲೆ ಕರಿ ನೆರಳು ಬೀಳುವಂತೆ ಮಾಡಿದೆ.

ನಾಡಾ ನಡೆಸುವ ಪ್ರಕ್ರಿಯೆಗಳ ಮೇಲೆ ಅಂತಿಮ ಫಲಿತಾಂಶವು ಅವಲಂಬಿತವಾಗಿರುತ್ತದೆ. ನಾಡಾ ಕಠಿಣ ನಿಲುವು ತಾಳಿದರೆ ತುಲಿಕಾ ಎರಡು ವರ್ಷಗಳ ತನಕ ಅಮಾನತು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದು ಅವರ ವೃತ್ತಿಜೀವನ ಹಾಗೂ ಭಾರತದ ಭವಿಷ್ಯದ ಪದಕದ ಭರವಸೆ ಎರಡಕ್ಕೂ ಗಮನಾರ್ಹ ಹೊಡೆತ ನೀಡಲಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries