HEALTH TIPS

FATF ವಿಶ್ವಾಸಾರ್ಹತೆ ಪ್ರಶ್ನಿಸುವ ಪ್ರಯತ್ನ ಪರಿಶೀಲನೆಯ ಭಯದ ಪ್ರತಿಬಿಂಬ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತ ಪರೋಕ್ಷ ವಾಗ್ದಾಳಿ

 ವಿಶ್ವಸಂಸ್ಥೆ: ಈಂಖಿಈ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಕೆಲವು ದೇಶಗಳು ನಡೆಸುವ ಪ್ರಯತ್ನಗಳು ಪರಿಶೀಲನೆಯ ಭಯವನ್ನು ಪ್ರತಿಬಿಂಬಿಸುತ್ತವೆ. ಈ ದೇಶಗಳು ಅಸ್ಥಿರತೆಯನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕು ಮತ್ತು ತಮ್ಮ ಭೂಪ್ರದೇಶವನ್ನು ಭಯೋತ್ಪಾದನೆಗೆ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಬೇಕು ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಭಾರತ ಆಗ್ರಹಿಸಿದೆ. 


ವಿಶ್ವಸಂಸ್ಥೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, "ಜಾಗತಿಕ ಭಯೋತ್ಪಾದನೆ ನಿಧಿ ತಡೆ ಮತ್ತು ಅಕ್ರಮ ಹಣ ವರ್ಗಾವಣೆ ವಿರೋಧಿ ವ್ಯವಸ್ಥೆಯಲ್ಲಿ ಈಂಖಿಈ ಅತ್ಯಗತ್ಯವಾದ ಆಧಾರಸ್ತಂಭವಾಗಿ ಮುಂದುವರಿದಿದೆ. ಇದರ ಕಾರ್ಯವೈಖರಿಯು ತಾಂತ್ರಿಕ, ಪುರಾವೆ ಆಧಾರಿತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಮಾನದಂಡಗಳಲ್ಲಿ ಬೇರೂರಿದೆ. ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಪ್ರಯತ್ನಗಳು ಸಾಮಾನ್ಯವಾಗಿ ಪ್ರಕ್ರಿಯೆಗೆ ಸಂಬಂಧಿಸಿದ ನೈಜ ಕಳಕಳಿಗಳಿಗಿಂತ ಹೆಚ್ಚಾಗಿ ಪರಿಶೀಲನೆಯ ಭಯವನ್ನೇ ಪ್ರತಿಬಿಂಬಿಸುತ್ತವೆ.

ಪ್ರತಿಕೂಲ ಮೌಲ್ಯಮಾಪನಗಳನ್ನು ಎದುರಿಸುತ್ತಿರುವ ದೇಶಗಳು ತಮ್ಮಲ್ಲಿ ಗುರುತಿಸಲಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು, ಆಂತರಿಕ ಜಾರಿ ವ್ಯವಸ್ಥೆಯನ್ನು ಬಲಪಡಿಸಬೇಕು, ಹಣಕಾಸು ಪಾರದರ್ಶಕತೆಯನ್ನು ಸುಧಾರಿಸಬೇಕು ಮತ್ತು ಭಯೋತ್ಪಾದನೆಗೆ ಧನಸಹಾಯ ನೀಡುವ ಜಾಲಗಳ ವಿರುದ್ಧ ಬದಲಾಯಿಸಲಾಗದ ಕಠಿಣ ಕ್ರಮಗಳನ್ನು ಪ್ರದರ್ಶಿಸಬೇಕು" ಎಂದು ಅವರು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.

ಭಾರತವು 2010ರಿಂದ ಈಂಖಿಈನ ಸದಸ್ಯ ರಾಷ್ಟ್ರವಾಗಿದೆ. ಕೇಂದ್ರ ಸಾಂಸ್ಕೃತಿಕ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರನ್ನು ಜುಲೈ 2026ರಿಂದ ಜೂನ್ 2027ರ ಅವಧಿಗೆ ಈಂಖಿಈನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries