HEALTH TIPS

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: NTAಯ ಪ್ರಶ್ನೆಪತ್ರಿಕೆ ತಯಾರಕನಿಗೆ 5 ಲಕ್ಷ ರೂ. ಪಾವತಿ, 111 ಪ್ರಶ್ನೆಗಳು ಹೋಲಿಕೆ: ಸಿಬಿಐ ಹೇಳಿಕೆ

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟ ಲಾತೂರ್ ಮೂಲದ ತರಬೇತಿ ಕೇಂದ್ರದ ಮಾಲೀಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್, ಪರೀಕ್ಷೆಗೆ ಪ್ರಶ್ನೆಗಳನ್ನು ಸಿದ್ಧಪಡಿಸಿದ ಎನ್‌ಟಿಎ ಸಮಿತಿಯಲ್ಲಿದ್ದ ಪಿ. ವಿ. ಕುಲಕರ್ಣಿ ಅವರಿಂದ ರಸಾಯನಶಾಸ್ತ್ರದ ಪ್ರಶ್ನೆಗಳನ್ನು ಪಡೆಯಲು 5 ಲಕ್ಷ ರೂ. ಪಾವತಿಸಿದ್ದರು ಎಂದು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬುಧವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಕುಲಕರ್ಣಿ ಅವರ ತರಬೇತಿ ತರಗತಿಗಳಿಗೆ ಮೋಟೆಗಾಂವ್ಕರ್ ಅವರ ಮಗ ಹಾಜರಾಗಿದ್ದಾಗ ಈ ಪ್ರಶ್ನೆಗಳನ್ನು ನೀಡಲಾಗಿತ್ತು ಎಂದು ಸಿಬಿಐ ಆರೋಪಿಸಿರುವುದಾಗಿ ಓಆಖಿಗಿ ವರದಿ ಮಾಡಿದೆ. 


ಮೋಟೆಗಾಂವ್ಕರ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡಿದ ಸಿಬಿಐ, ಆರೋಪಿ ಮೋಟೆಗಾಂವ್ಕರ್ ಇತರ ಸಹ-ಆರೋಪಿಗಳೊಂದಿಗೆ ಸಂಚು ರೂಪಿಸಿ, ಪರೀಕ್ಷೆಗೆ ಮುನ್ನವೇ ನೀಟ್‌ (ಯುಜಿ) ಸೋರಿಕೆಯಾದ ರಸಾಯನಶಾಸ್ತ್ರದ ಪ್ರಶ್ನೆಗಳನ್ನು ಪಡೆದುಕೊಂಡಿದ್ದರು. ಇದಕ್ಕಾಗಿ 5 ಲಕ್ಷ ರೂ. ಪಾವತಿಸಿದ್ದರು ಎಂದು ಆರೋಪಿಸಿದೆ.

ಬಳಿಕ ಒದಗಿಸಲಾದ ಪ್ರಶ್ನೆಗಳಿಂದ ಮೋಟೆಗಾಂವ್ಕರ್ ಅವರು ಕೈಬರಹದ ಟಿಪ್ಪಣಿಗಳನ್ನು ಸಿದ್ಧಪಡಿಸಿದ್ದರು. ಪ್ರಶ್ನೆಗಳನ್ನು ಕುಲಕರ್ಣಿ ಅವರ ರಸಾಯನಶಾಸ್ತ್ರ ಟ್ಯುಟೋರಿಯಲ್ ತರಗತಿಗಳಲ್ಲಿ ನೀಡಲಾಗಿತ್ತು ಎಂದು ತಿಳಿಸಿದೆ.

ಸಿಬಿಐ ಮೋಟೆಗಾಂವ್ಕರ್ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ರಸಾಯನಶಾಸ್ತ್ರದ 132 ಕೈಬರಹದ ಪ್ರಶ್ನೆಗಳನ್ನು ಒಳಗೊಂಡ 36 ಚಿತ್ರಗಳು ಪತ್ತೆಯಾಗಿವೆ. ಅದರಲ್ಲಿ ಐದು ನಕಲಿ ಚಿತ್ರಗಳು ಸೇರಿವೆ. ಇವುಗಳಲ್ಲಿ 111 ಪ್ರಶ್ನೆಗಳು ನೀಟ್‌ ಯುಜಿ 2026 ಗಾಗಿ ಸಿದ್ಧಪಡಿಸಲಾದ ಎನ್‌ಟಿಎ ಮಾಸ್ಟರ್ ಪ್ರಶ್ನೆ ಪತ್ರಿಕೆಯ ಸೆಟ್‌ಗಳಲ್ಲಿನ ಪ್ರಶ್ನೆಗಳಿಗೆ ಹೋಲಿಕೆಯಾಗುತ್ತವೆ ಎಂದು ತಿಳಿದುಬಂದಿದೆ ಎಂದು ಸಿಬಿಐ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಮೋಟೆಗಾಂವ್ಕರ್ ಅವರ ಕೈಬರಹದಲ್ಲಿತ್ತು ಎನ್ನಲಾದ 2026ರ ನೀಟ್‌ ಯುಜಿಗೆ ಸಂಬಂಧಿಸಿದ ರಸಾಯನಶಾಸ್ತ್ರ ಪ್ರಶ್ನೆಗಳ ಟಿಪ್ಪಣಿಗಳನ್ನು ಅವರ ಮೊಬೈಲ್ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಸಹ-ಆರೋಪಿ ಮನೋಜ್ ಭಗವಾನ್‌ರಾವ್ ಶಿರೂರೆ ನೀಡಿದ ಮಾಹಿತಿಯ ಆಧಾರದ ಮೇಲೆ ಪಾವತಿಸಲಾಗಿದೆ ಎನ್ನಲಾದ ಹಣವನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಮೇ 3ರ ಪರೀಕ್ಷೆಗೆ ಸುಮಾರು 10 ದಿನಗಳ ಮೊದಲು ಈ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೆಟಾಡೇಟಾ ವಿಶ್ಲೇಷಣೆಯು ತೋರಿಸಿದೆ ಎಂದು ಸಿಬಿಐ ಹೇಳಿದೆ.

ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯು 13 ಜನರನ್ನು ಬಂಧಿಸಿದ್ದು, ಅವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ, ಮೇ 3ರಂದು ವೈದ್ಯಕೀಯ ಪ್ರವೇಶಾತಿಗಾಗಿ ನಡೆಸಲಾಗಿದ್ದ ನೀಟ್‌ ಯುಜಿ ಪರೀಕ್ಷೆಯನ್ನು ಮೇ 12ರಂದು ರದ್ದುಗೊಳಿಸಲಾಗಿತ್ತು. ಬಳಿಕ ಜೂನ್‌ 21ರಂದು ಮರುಪರೀಕ್ಷೆ ನಡೆಸಲಾಯಿತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries