HEALTH TIPS

ಕಸದ ಬುಟ್ಟಿಗೆ ಎಸೆದ ಲಾಟರಿ ಟಿಕೆಟ್ ಹುಡುಕಿ ₹10.9 ಕೋಟಿ ಗೆದ್ದ ಮಹಿಳೆ!

ಬಿಟೊಂಟೊ : '‍ತಾಳಿದವನು ಬಾಳಿಯಾನು' ಎಂಬ ಪ್ರಸಿದ್ಧ ಗಾದೆ ಮಾತಿದೆ. ಆದರೆ, ತಾಳ್ಮೆ ಕಳೆದುಕೊಂಡ ಇಟಲಿಯ ಮಹಿಳೆಯೊಬ್ಬರು ಖರೀದಿಸಿದ್ದ ಲಾಟರಿ ಟಿಕೆಟ್‌ ಅನ್ನು ಕಸದ ಬುಟ್ಟಿಗೆ ಹಾಕಿದ್ದರು. ಆದರೆ 2 ದಿನಗಳ ಬಳಿಕ ತಾವು ಖರೀದಿಸಿದ್ದ ಟಿಕೆಟ್‌ಗೇ ಬಹುಮಾನ ಬಂದಿದೆ ಎಂದು ತಿಳಿದು ಕಸದ ಬುಟ್ಟಿಯಲ್ಲಿ ತಡಕಾಡಿದ್ದಾರೆ.

ಅದೃಷ್ಟವಶಾತ್ ಟಿಕೆಟ್ ಸಿಕ್ಕಿದ್ದು ಬರೋಬ್ಬರಿ ₹10.9 ಕೋಟಿ ಹಣ ಗೆದ್ದಿದ್ದಾರೆ. 


ದಕ್ಷಿಣ ಇಟಲಿಯ ಬಿಟೊಂಟೊ ನಗರದ ಮಹಿಳೆಯೊಬ್ಬರು, ಲಾಟರಿ ಟಿಕೆಟ್‌ ಒಂದನ್ನು ಖರೀದಿಸಿದ್ದರು. ಲಾಟರಿ ಸಿಕ್ಕಿದೆಯೇ ಎಂದು ತಿಳಿದುಕೊಳ್ಳಲು ಯಂತ್ರಕ್ಕೆ ಲಾಟರಿ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿದ್ದರು. ಆದರೆ ಆ ಯಂತ್ರ 'ಪಾವತಿಸಲಾಗುವುದಿಲ್ಲ' ಎಂಬ ಸಂದೇಶವನ್ನು ತೋರಿಸಿತ್ತು. ‌

ಇದರಿಂದ ಬೇಸರಗೊಂಡ ಮಹಿಳೆ ಕ್ಷಣಕಾಲವೂ ಯೋಚಿಸದೆ, ಲಾಟರಿ ಟಿಕೆಟ್‌ ಅನ್ನು ಕಸದ ಬುಟ್ಟಿಗೆ ಎಸೆದಿದ್ದರು. ಆದರೆ, ಯಂತ್ರ ನೀಡಿದ್ದ ಸಂದೇಶವನ್ನು ಆ ಮಹಿಳೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು ಎಂಬುದು ಅರ್ಥವಾಗುವುದರ ಒಳಗೆ ಆ ಟಿಕೆಟ್ ಕಸದ ರಾಶಿ ಸೇರಿತ್ತು. ಹಣದ ಮೊತ್ತ ತುಂಬಾ ದೊಡ್ಡದಾಗಿದ್ದರಿಂದ ಸಣ್ಣ ಅಂಗಡಿಯಲ್ಲಿ ಆ ಹಣವನ್ನು ನೀಡಲು ಸಾಧ್ಯವಿಲ್ಲ ಎನ್ನುವುದು ಆ ಮೆಸೇಜ್‌ನ ಸಾರವಾಗಿತ್ತು.

ಇದಾದ ನಂತರ ಕುಟುಂಬದ ಸದಸ್ಯರೊಬ್ಬರು ಮಹಿಳೆಗೆ ಫೋನ್ ಮಾಡಿ, 2, 4, 8, 10, ಮತ್ತು 51 ಸಂಖ್ಯೆಗಳು ಲಾಟರಿಯಲ್ಲಿ ಗೆದ್ದಿರುವುದಾಗಿ ತಿಳಿಸಿದರು. ಬಿಬಿಸಿಯ ವರದಿಯ ಪ್ರಕಾರ, ಆ ಮಹಿಳೆ ಯಾವಾಗಲೂ ಒಂದೇ ಸಂಖ್ಯೆಯ ಮೇಲೆ ಲಾಟರಿ ಟಿಕೆಟ್ ಅನ್ನು ಖರೀದಿ ಮಾಡುತ್ತಿದ್ದರು. ಏಕೆಂದರೆ, ಮಹಿಳೆಗೆ ಆ ಸಂಖ್ಯೆ ಹೆಚ್ಚು ಇಷ್ಟವಾಗಿತ್ತು.

ತಕ್ಷಣ ಮಹಿಳೆ ಕಸದ ಬುಟ್ಟಿಗೆ ಎಸೆದ ಟಿಕೆಟ್ ಹುಡುಕಲು ಅಂಗಡಿಗೆ ಧಾವಿಸಿದ್ದಾರೆ. ಆದರೆ, ಆ ಸಮಯಕ್ಕಾಗಲೇ ಕಸದವರು ಆ ಬುಟ್ಟಿಯನ್ನು ಕಸದ ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದರು. ಹತಾಶೆಗೊಂಡ ಮಹಿಳೆ, ತ್ಯಾಜ್ಯ ನಿರ್ವಹಣಾ ಕಂಪನಿಯ ಆಡಳಿತಾಧಿಕಾರಿ ರಾಬರ್ಟೊ ನಿಕೋಲಾ ಟೋಸ್ಕಾನೊ ಅವರನ್ನು ಸಂಪರ್ಕಿಸಿ ನಡೆದ ವಿಷಯವನ್ನು ವಿವರಿಸಿದ್ದರು.

ಆಗ ರಾಬರ್ಟೊ, 'ಈಗಾಗಲೇ ಟ್ರಕ್‌ ಕಸವನ್ನು ತೆಗೆದುಕೊಂಡು ಹೋಗಿದೆ, ರಾಶಿ ಕಸದೊಳಗೆ ಟಿಕೆಟ್ ಮತ್ತೆ ಸಿಗುತ್ತದೆ ಎಂಬ ಭರವಸೆ ನನಗಿಲ್ಲ, ಆದರೂ ಪ್ರಯತ್ನ ಮಾಡೋಣ' ಎಂದು ಹೇಳಿ, ಮಹಿಳೆಯ ಒತ್ತಾಯದ ಮೇರೆಗೆ ಹೇಗೋ ಸರಿಯಾದ ಕಸದ ಟ್ರಕ್ ಅನ್ನು ಪತ್ತೆ ಮಾಡಿ, ಇಡೀ ಟ್ರಕ್‌ನ ಕಸವನ್ನು ಸುರಿದು, ಒಂದು ದಿನದ ನಿರಂತರ ಹುಡುಕಾಟದ ಬಳಿಕ ಅಂತಿಮವಾಗಿ ಟಿಕೆಟ್ ಸಿಕ್ಕಿತ್ತು.

ಕಸದ ನಡುವೆ ಟಿಕೆಟ್ ಹುಡುಕಿ ಕೊಟ್ಟಿದ್ದಕ್ಕಾಗಿ ತ್ಯಾಜ್ಯ ನಿರ್ವಹಣಾ ಕಂಪನಿಗೆ ವೆಚ್ಚ ಪಾವತಿಸಬೇಕಾಯಿತು. ಜೊತೆಗೆ ಲಾಟರಿ ಟಿಕೆಟ್‌ ಹಣವೂ ದೊರೆಯಿತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries