HEALTH TIPS

ಬ್ಯಾಂಕುಗಳಿಂದ ಕಳೆದ 12 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ. ಕಾರ್ಪೊರೇಟ್ ಸಾಲ ರೈಟ್ ಆಫ್: ಕೇಂದ್ರ ಸರಕಾರ

ನವದೆಹಲಿ: ಕಳೆದ 12 ವರ್ಷಗಳಲ್ಲಿ ಬ್ಯಾಂಕುಗಳು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸೇವೆಗಳಿಗೆ ನೀಡಿದ್ದ ಸುಮಾರು 10 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್‌ಆಫ್ ಮಾಡಿವೆ ಎಂದು ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ. 


ಸೋಮವಾರ ನೀಡಿದ ಲಿಖಿತ ಉತ್ತರದಲ್ಲಿ ಆರ್‌ಬಿಐನಿಂದ ಲಭ್ಯ ಮಾಹಿತಿಯನ್ನು ಹಂಚಿಕೊಂಡ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ ಚೌಧರಿಯವರು ವಿತ್ತವರ್ಷ 25ರಲ್ಲಿ 63,19,057 ಕೋಟಿ ರೂ.ಗಳಿದ್ದ ರೈಟ್ ಆಫ್ ಮಾಡಲಾದ ಸಾಲಗಳ ಮೊತ್ತ ವಿತ್ತವರ್ಷ 26ರಲ್ಲಿ 69,21,734 ಕೋಟಿ ರೂ.ಗಳಿಗೇರಿದೆ ಎಂದು ತಿಳಿಸಿದರು.

ರೈಟ್ ಆಫ್ ಮಾಡಲಾದ ಸಾಲಗಳ ಮೊತ್ತ 2018-19ರಲ್ಲಿ 1,48,753 ಕೋಟಿ ರೂ.ಗಳ ಗರಿಷ್ಠವನ್ನು ತಲುಪಿತ್ತು ಎನ್ನುವುದನ್ನು ಆರ್‌ಬಿಐ ಡಾಟಾ ತೋರಿಸಿದೆ.

ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಹೊರಡಿಸಿರುವ ನಿರ್ದೇಶನಗಳಂತೆ ರೈಟ್ ಆಫ್ ಪ್ರಕ್ರಿಯೆಯು ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ಸರಿಹೊಂದಿಸಲು ಕೈಗೊಳ್ಳುವ ಲೆಕ್ಕಪತ್ರ ವಿಧಾನವಾಗಿದೆ ಎಂದು ಚೌಧರಿ ಹೇಳಿದರು.

ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಸೆ.30,2025ರವರೆಗೆ ಕಳೆದ ಐದೂವರೆ ವಿತ್ತವರ್ಷಗಳಲ್ಲಿ ಒಟ್ಟೂ 6.15 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿವೆ ಎಂದು ಚೌಧರಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ತಿಳಿಸಿದ್ದರು.












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries