HEALTH TIPS

ಪೆರುವಿನ ನಾಝ್ಕಾ ಲೈನ್ಸ್‌ ವೀಕ್ಷಣಾ ಹಾರಾಟದ ವೇಳೆ ವಿಮಾನ ಪತನ: 13 ಮಂದಿ ಮೃತ್ಯು

ಲಿಮಾ: ಪೆರುವಿನ ವಿಶ್ವಪ್ರಸಿದ್ಧ ನಾಝ್ಕಾ ಲೈನ್ಸ್ ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಶನಿವಾರ ನಾಝ್ಕಾ ನಗರದ ಹೊರವಲಯದ ಹೊಲವೊಂದರಲ್ಲಿ ಪತನಗೊಂಡು ವಿಮಾನದಲ್ಲಿದ್ದ 13 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 


ನಾಝ್ಕಾ ನಗರಾಡಳಿತವು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಅಪಘಾತಕ್ಕೀಡಾದ ವಿಮಾನವು ಪ್ರವಾಸಿಗರನ್ನು ನಾಝ್ಕಾ ಲೈನ್ಸ್‌ನ ದೃಶ್ಯವೀಕ್ಷಣಾ ಹಾರಾಟಕ್ಕೆ ಕರೆದೊಯ್ಯುತ್ತಿತ್ತು ಎಂದು ತಿಳಿಸಿದೆ.

ನೂರಾರು ವರ್ಷಗಳ ಹಿಂದೆ ಪೆರುವಿನ ಸ್ಥಳೀಯ ನಿವಾಸಿಗಳು ನಾಝ್ಕಾ ಸುತ್ತಮುತ್ತಲಿನ ಮರುಭೂಮಿಯಲ್ಲಿ ಕೆತ್ತಿದ ಬೃಹತ್ ಜಿಯೋಗ್ಲಿಫ್‌ಗಳ ಸಮೂಹವೇ ನಾಝ್ಕಾ ಲೈನ್ಸ್. ವಿವಿಧ ಪ್ರಾಣಿಗಳು ಹಾಗೂ ಇತರ ಆಕೃತಿಗಳನ್ನು ರೂಪಿಸುವ ಈ ಜಿಯೋಗ್ಲಿಫ್‌ಗಳನ್ನು ವಿಮಾನ ಅಥವಾ ವೀಕ್ಷಣಾ ಗೋಪುರಗಳಿಂದ ಮಾತ್ರ ಸಂಪೂರ್ಣವಾಗಿ ವೀಕ್ಷಿಸಲು ಸಾಧ್ಯ. ಈ ಕಾರಣದಿಂದ ನಾಝ್ಕಾ ಲೈನ್ಸ್‌ನ ಮೇಲಿನ ದೃಶ್ಯವೀಕ್ಷಣಾ ಹಾರಾಟಗಳು ವಿಶ್ವದ ವಿವಿಧ ದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಅಪಘಾತಕ್ಕೀಡಾದ ವಿಮಾನವು ಸಮೀಪದ ಇಕಾ ನಗರದಿಂದ ಹೊರಟಿತ್ತು. ಪೆರುವಿನ ಏರೋಡಿಯಾನಾ ಕಂಪೆನಿ ವಿಮಾನವನ್ನು ನಿರ್ವಹಿಸುತ್ತಿತ್ತು ಎಂದು ನಾಝ್ಕಾ ನಗರಾಡಳಿತ ತಿಳಿಸಿದೆ. ಕಂಪೆನಿಯ ವೆಬ್‌ಸೈಟ್‌ನ ಮಾಹಿತಿ ಪ್ರಕಾರ, ಕಳೆದ 14 ವರ್ಷಗಳಿಂದ ಸೆಸ್ನಾ ಗ್ರ್ಯಾಂಡ್ ಕ್ಯಾರವಾನ್ ವಿಮಾನಗಳ ಮೂಲಕ ನಾಝ್ಕಾ ಲೈನ್ಸ್‌ನ ಮೇಲೆ ದೃಶ್ಯವೀಕ್ಷಣಾ ಹಾರಾಟಗಳನ್ನು ನಡೆಸಲಾಗುತ್ತಿದೆ.

ಪೆರುವಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ವಿಮಾನದಲ್ಲಿ 11 ವಿದೇಶಿ ಪ್ರವಾಸಿಗರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ವಿದೇಶಿ ಪ್ರವಾಸಿಗರಲ್ಲಿ ಇಬ್ಬರು ಜರ್ಮನಿ, ಇಬ್ಬರು ಸ್ಪೇನ್ ಹಾಗೂ ಏಳು ಮಂದಿ ಇಟಲಿ ದೇಶದವರಾಗಿದ್ದರು ಎಂದು ಪೆರುವಿನ ಸರ್ಕಾರಿ ಸುದ್ದಿ ಸಂಸ್ಥೆ ಅಜೆನ್ಸಿಯಾ ಆಂಡಿನಾ ವರದಿ ಮಾಡಿದೆ.

ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೆರುವಿನ ಅಧಿಕಾರಿಗಳು ತಿಳಿಸಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries