HEALTH TIPS

ಸೈಬರ್ ವಂಚನೆ;ಇಬ್ಬರ ಬಂಧನ: ₹30 ಸಾವಿರ ಕೋಟಿ ವಹಿವಾಟು ಪ್ರಕರಣ ಪತ್ತೆಹಚ್ಚಿದ ಇ.ಡಿ

ಮುಂಬೈ/ಪಣಜಿ: ₹30 ಸಾವಿರ ಕೋಟಿ ವಹಿವಾಟು ಒಳಗೊಂಡ, ದೇಶದಾದ್ಯಂತ ನಡೆದ ಸೈಬರ್‌ ವಂಚನೆ ಹಾಗೂ 'ಡಿಜಿಟಲ್‌ ಬಂಧನ' ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ಫಾಹೀಮ್‌ ಮೊಯಿನ್‌ ಹುಸೇನ್‌ ಸೈಯದ್‌ ಹಾಗೂ ನಯೀಮ್‌ ಮುಯೀನ್‌ ಸಯೈದ್‌ನನ್ನು ಭಾನುವಾರವೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಗೋವಾದ ಮಹಿಳೆಯೊಬ್ಬರನ್ನು ಡಿಜಿಟಲ್‌ ಬಂಧನಕ್ಕೆ ಒಳಪಡಿಸಿದ್ದ ಸೈಬರ್‌ ವಂಚಕರು, 2025ರ ಮೇ ತಿಂಗಳಿನಿಂದ ಜೂನ್‌ವರೆಗೆ ₹2.60 ಕೋಟಿ ವಂಚಿಸಿದ್ದರು. ಈ ಪ್ರಕರಣದ ವಿಚಾರಣೆ ಆರಂಭಿಸಿದ ಇ.ಡಿ ಅಧಿಕಾರಿಗಳು, ದೊಡ್ಡ ಮೊತ್ತದ ಹಣ ಅಕ್ರಮ ವರ್ಗಾವಣೆ ಆಗಿರುವುದನ್ನು ಪತ್ತೆಹಚ್ಚಿದ್ದಾರೆ.

ಬಂಧಿತರನ್ನು ಪಣಜಿಗೆ ಕರೆದೊಯ್ಯಲು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವು ತನಿಖಾ ಸಂಸ್ಥೆಗೆ ಅನುಮತಿ ನೀಡಿದೆ. ಅಲ್ಲಿಯೇ ಅವರ ವಿರುದ್ಧ ಪ್ರಕರಣ ದಾಖಲಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಂಚನೆ ಹೇಗೆ?

ವಂಚಿಸಿದ ಹಣವು ತಮ್ಮ ಬ್ಯಾಂಕ್‌ ಖಾತೆಗೆ ಸಂತ್ರಸ್ತರಿಂದ ಜಮಾ ಆದ ಬಳಿಕ ಅದನ್ನು ನಗದಾಗಿಸಿಕೊಳ್ಳುತ್ತಿದ್ದ ಆರೋಪಿಗಳು, ನಂತರ ಅದನ್ನು ಆರ್‌ಬಿಐ ಪರವಾನಗಿ ಹೊಂದಿದ ಸಂಸ್ಥೆಗಳ ಮೂಲಕ ವಿದೇಶಿ ಹಣವಾಗಿ ಮಾರ್ಪಡಿಸುತ್ತಿದ್ದರು.

ಬ್ಯಾಂಕ್‌ ಖಾತೆಗಳ ಮೂಲಕವೇ ₹27 ಸಾವಿರ ಕೋಟಿ ವರ್ಗಾವಣೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಉಳಿದ ₹3 ಸಾವಿರ ಕೋಟಿ ಮೊತ್ತವನ್ನು ಸೈಬರ್‌ ಅಪರಾಧ ಜಾಲ ಬಳಸಿಕೊಂಡು ನಗದು ರೂಪದಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ತನಿಖಾ ಸಂಸ್ಥೆಯು ಅಂದಾಜಿಸಿರುವುದಾಗಿ ಮೂಲಗಳು ಖಚಿತಪಡಿಸಿವೆ.

ದೇಶದ 20ಕ್ಕೂ ಅಧಿಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಸಂತ್ರಸ್ತರು ನೀಡಿದ ದೂರಿನ ಮೇಲೆ ದಾಖಲಾದ 150-160 ಎಫ್‌ಐಆರ್‌ ಆಧರಿಸಿ ಈ ಅಂದಾಜು ಮಾಡಲಾಗಿದೆ.

ದಾಳಿ: ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು ಗೋವಾ ಹಾಗೂ ಮುಂಬೈನಲ್ಲಿ ಜುಲೈ ಹಾಗೂ ಆಗಸ್ಟ್‌ 21ರಂದು ದಾಳಿ ನಡೆಸಿತ್ತು. ಈ ವೇಳೆ ₹3.25 ಕೋಟಿ ನಗದು ಮುಟ್ಟುಗೋಲು ಹಾಕಿಕೊಂಡಿತ್ತು.

ಹಣ ವರ್ಗಾವಣೆಗಾಗಿಯೇ ನಕಲಿ ಕಂಪನಿಗಳನ್ನು ರಚಿಸಿ, ಅವುಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಚಾಲಕರು ಹಾಗೂ ಉದ್ಯೋಗಿಗಳನ್ನು ಒಂದು ಕೊಠಡಿಯಲ್ಲಿರಿಸಿ, ನಿರ್ದೇಶಕರು ಎಂದು ಬಿಂಬಿಸಲಾಗಿತ್ತು. ಇಂತಹ ವಂಚನೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಇದೇ ರೀತಿಯ ಹುನ್ನಾರವನ್ನು ನಡೆಸಿಕೊಂಡು ಬರಲಾಗುತ್ತಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries