HEALTH TIPS

ಆರು ತಿಂಗಳಲ್ಲಿ ಕೆನಡಾದಿಂದ 3,323 ಭಾರತೀಯರ ಗಡಿಪಾರು

ಟೊರೊಂಟೊ: ಈ ವರ್ಷದ ಮೊದಲ ಆರು ತಿಂಗಳಲ್ಲಿ ಕೆನಡಾದಿಂದ ಗಡಿಪಾರು ಮಾಡಲಾದ ಭಾರತೀಯರ ಸಂಖ್ಯೆಯು ಅಮೆರಿಕದಿಂದ ವಾಪಸ್ ಕಳುಹಿಸಲಾದ ಭಾರತೀಯರ ಸಂಖ್ಯೆಯ ಎರಡೂವರೆ ಪಟ್ಟಿಗಿಂತ ಹೆಚ್ಚಾಗಿದೆ. 


ಜೂನ್ ಅಂತ್ಯದವರೆಗೆ 3,323 ಭಾರತೀಯರನ್ನು ದೇಶದಿಂದ ಗಡಿಪಾರು ಮಾಡಲಾಗಿದೆ ಎಂದು ಕೆನಡಾ ಗಡಿ ಸೇವೆಗಳ ಸಂಸ್ಥೆ (ಸಿಬಿಎಸ್‌ಎ) ಬಿಡುಗಡೆ ಮಾಡಿದ ಹೊಸ ದತ್ತಾಂಶ ತಿಳಿಸಿದೆ.

ಇದಕ್ಕೆ ಹೋಲಿಸಿದರೆ, ಜುಲೈವರೆಗಿನ

ಅವಧಿಯಲ್ಲಿ ಅಮೆರಿಕದಿಂದ 1,273 ಭಾರತೀಯರನ್ನು ಗಡಿಪಾರು ಮಾಡಲಾಗಿತ್ತು. ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ತಿಂಗಳ ಕೊನೆಯಲ್ಲಿ ಬಹಿರಂಗಪಡಿಸಿತ್ತು.

ವಾಸ್ತವವಾಗಿ, ಕೆನಡಾದಿಂದ ಗಡೀಪಾರಾ ಗುತ್ತಿರುವ ಭಾರತೀಯರ ಸಂಖ್ಯೆಯು ವರ್ಷದ ದಾಖಲೆಯತ್ತ ಸಾಗುತ್ತಿದೆ. 2025ರ ಇಡೀ ವರ್ಷದಲ್ಲಿ ಒಟ್ಟು 3,779 ಭಾರತೀಯರನ್ನು ಗಡಿಪಾರು ಮಾಡಲಾಗಿತ್ತು ಹಾಗೂ ಅದೊಂದು ದಾಖಲೆಯಾಗಿತ್ತು. ಈಗ, 2026ರ ಈವರೆ

ಗಿನ ಸಂಖ್ಯೆಯು ಈಗಾಗಲೇ ಹಿಂದಿನ ವರ್ಷದ ಸಂಖ್ಯೆಯ ಸುಮಾರು 88ಶೇ. ತಲುಪಿದೆ.

ಕಳೆದ ವರ್ಷವೂ ಕೆನಡಾ, ಅಮೆರಿಕಕ್ಕಿಂತ ಹೆಚ್ಚಿನ

ಭಾರತೀಯರನ್ನು ಗಡಿಪಾರು ಮಾಡಿತ್ತು. ಆ ವರ್ಷ, ಅಮೆರಿಕ 3,567 ಜನರನ್ನು ಗಡಿಪಾರು

ಮಾಡಿತ್ತು.

ಈ ವರ್ಷದ ಮೊದಲಾರ್ಧದಲ್ಲಿ, ಅತಿ ಹೆಚ್ಚು ಗಡಿಪಾರು ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೆಕ್ಸಿಕೊವನ್ನು ಹಿಂದಿಕ್ಕಿದೆ.

ಅಪರಾಧ ಕೃತ್ಯಗಳು ಕಾರಣ?

ಗಡಿಪಾರಿಗೆ ಕಾರಣಗಳನ್ನು ಸಿಬಿಎಸ್‌ಎ ದೇಶವಾರು ವಿಂಗಡಿಸಿಲ್ಲವಾದರೂ, ಅಪರಾಧ ಕೃತ್ಯಗಳು ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಮುಖ್ಯವಾಗಿ, ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾದ ಸರ್ರೆ ಹಾಗೂ ಆಲ್ಬರ್ಟಾದ ಎಡ್ಮಂಟನ್ ಮತ್ತು ಕ್ಯಾಲ್ಗರಿ ಉಪನಗರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸುಲಿಗೆ ಸಂಬಂಧಿತ ಹಿಂಸಾಚಾರ ಇದಕ್ಕೆ ಮುಖ್ಯ ಕಾರಣವಾಗಿರಬಹುದು ಎಂಬುದಾಗಿ ಭಾವಿಸಲಾಗಿದೆ. ಈ ಸುಲಿಗೆ ಕೃತ್ಯಗಳಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳಾಗಿ ಕೆನಡಾಕ್ಕೆ ಬಂದವರಾಗಿದ್ದಾರೆ. ಲಾರೆನ್ಸ್ ಬಿಷ್ಣೋಯಿ ನೇತೃತ್ವದ ತಂಡ ಸೇರಿದಂತೆ ವಿವಿಧ ಅಪರಾಧ ಗುಂಪುಗಳು ಈ ಮಾರ್ಗವನ್ನು ಹೇಗೆ ದುರುಪಯೋಗಪಡಿಸಿಕೊಂಡವು ಎಂಬುದರ ಕುರಿತು 'ಗ್ಲೋಬಲ್ ನ್ಯೂಸ್' ವರದಿಯೊಂದು ಬೆಳಕು ಚೆಲ್ಲಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries