HEALTH TIPS

ನೇಟೊ ಶೃಂಗಸಭೆ ಸಂದರ್ಭ ಇರಾನ್‍ಗೆ ಟ್ರಂಪ್ ಅವರ ನಿಖರವಾದ ಸ್ಥಳ ತಿಳಿದಿತ್ತು: ವರದಿ

ವಾಶಿಂಗ್ಟನ್: ಇರಾನ್‍ನಿಂದ ಮೇಲ್ಮೈಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ದಾಳಿಯ ಬೆದರಿಕೆ ಇದ್ದುದರಿಂದ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ತುರ್ಕಿಯೆಯಿಂದ ರಹಸ್ಯವಾಗಿ ನಿರ್ಗಮಿಸಬೇಕಾಯಿತು ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.


ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯ ಭೇಟಿಯನ್ನು ಮುಗಿಸಿದ ಟ್ರಂಪ್ ತಮ್ಮ ವಿಮಾನವನ್ನು ರಹಸ್ಯವಾಗಿ ಬದಲಾಯಿಸಿದ್ದರು. ಸಂಭಾವ್ಯ ದಾಳಿಯ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಹಲವು ಪ್ರಮುಖ ಸುಳಿವುಗಳನ್ನು ಕಲೆಹಾಕಿದ್ದವು.

ಟ್ರಂಪ್ ಪ್ರಯಾಣಿಸುತ್ತಿದ್ದ ಯಾವುದೇ ವಿಮಾನದ ವಿರುದ್ಧ ಮೇಲ್ಮೈಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ಬಳಸಬಹುದು ಎಂದು ಒಂದು ಸುಳಿವು ಸೂಚಿಸಿದರೆ, ನ್ಯಾಟೋ ಶೃಂಗಸಭೆಯ ನಡೆಯುತ್ತಿದ್ದ ಸ್ಥಳದ ಬಳಿ ವ್ಯಕ್ತಿಯೊಬ್ಬ ಹೆಗಲ ಮೇಲಿಂದ ಹಾರಿಸುವ ಕ್ಷಿಪಣಿಯೊಂದಿಗೆ ಕಂಡುಬಂದಿದ್ದನೆಂದು ಮತ್ತೊಂದು ಸುಳಿವು ಸೂಚಿಸಿತ್ತು. ಅಂಕಾರಾದಲ್ಲಿ ಟ್ರಂಪ್ ತಂಗಿದ್ದ ಸ್ಥಳದ ನಿಖರವಾದ ವಿವರಗಳು, ಅಂದರೆ ಅವರು ಕಟ್ಟಡದ ಯಾವ ಮಹಡಿಯಲ್ಲಿ ತಂಗಿದ್ದರು ಎಂಬುದು ಸಹ ಇರಾನ್ ಕಾರ್ಯಾಚರಣೆಗಾರರಿಗೆ ತಿಳಿದಿತ್ತು ಎಂದು ಗುಪ್ತಚರ ಮಾಹಿತಿ ತಿಳಿಸಿರುವುದಾಗಿ ವರದಿಯಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries