HEALTH TIPS

ಗಲ್ಫ್ ಮಿತ್ರರಾಷ್ಟ್ರಗಳು ಮನವಿ ಮಾಡಿಕೊಂಡಿದ್ದಕ್ಕೆ ಇರಾನ್ ಮೇಲಿನ ಹೊಸ ದಾಳಿಗಳನ್ನು ತಡೆಹಿಡಿಯಲು ಅಮೆರಿಕ, ಇಸ್ರೇಲ್ ಸಮ್ಮತಿಸಿವೆ: ಟ್ರಂಪ್

ವಾಶಿಂಗ್ಟನ್: ಒಪ್ಪಂದದ `ಬಹಿರಂಗ ಸುಳಿವುಗಳು' ಕಾಣಿಸುತ್ತಿರುವುದರಿಂದ ಮತ್ತು ಗಲ್ಫ್ ಮಿತ್ರರಾಷ್ಟ್ರಗಳು ರಾಜತಾಂತ್ರಿಕತೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಮ್ಮ ದೇಶ ಮತ್ತು ಇಸ್ರೇಲ್ ಇರಾನ್ ಮೇಲಿನ ಹೊಸ ದಾಳಿಗಳನ್ನು ತಡೆಹಿಡಿಯಲು ಸಮ್ಮತಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.


ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಯುಎಇ ಹಾಗೂ ಖತರ್ ಸೇರಿದಂತೆ ಅಮೆರಿಕದ ಇತರ ಪಾಲುದಾರ ದೇಶಗಳ ಮನವಿಯ ನಂತರ, ಅಮೆರಿಕವು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದ್ದರೂ ಅದನ್ನು ಕೈಬಿಡಲು ನಿರ್ಧರಿಸಿತು. ನಾವು ಕಾರ್ಯಾಚರಣೆ ಆರಂಭಿಸಲು ಎಲ್ಲ ರೀತಿಯಿಂದಲೂ ಸಿದ್ಧರಾಗಿದ್ದೆವು. ಆದರ ಒಪ್ಪಂದವೊಂದಕ್ಕೆ ಬರಲು ಇನ್ನೂ ಸಾಧ್ಯವಿದೆ ಎಂದು ಪ್ರಾದೇಶಿಕ ದೇಶಗಳು ನಂಬಿವೆ. ಹಾರ್ಮುಝ್ ಜಲಸಂಧಿಯ ವಿಚಾರದಲ್ಲಿ ಒಪ್ಪಂದದ ಸಾಧ್ಯತೆಯಿದೆ, ಹಾಗೆಯೇ ಅಣುಶಕ್ತಿಯ ವಿಚಾರದಲ್ಲೂ ಒಪ್ಪಂದ ಏರ್ಪಡಲಿದೆ. ಮುಂಬರುವ ಮಾತುಕತೆಗಳು ಹಾರ್ಮುಝ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದು ಮತ್ತು ಇರಾನ್‍ನ ಪರಮಾಣು ನಿಶ್ಶಸ್ತ್ರೀಕರಣವನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಗಮನ ಹರಿಸಲಿವೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries