HEALTH TIPS

ಭೌತವಿಜ್ಞಾನಿ ದೀಪಕ್‌ ಧರ್‌ಗೆ 'ಡಿರಾಕ್‌ ಮೆಡಲ್' ಗೌರವ

ಲಂಡನ್: ಸೈದ್ಧಾಂತಿಕ ಭೌತವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ನೀಡುವ ಪ್ರತಿಷ್ಠಿತ 'ಡಿರಾಕ್ ಮೆಡಲ್'ಗೆ ಭಾರತದ ಭೌತವಿಜ್ಞಾನಿ ದೀಪಕ್‌ ಧರ್‌ ಅವರನ್ನು ಆಯ್ಕೆ ಮಾಡಲಾಗಿದೆ. 


ಧರ್ ಅವರು ಬೆಂಗಳೂರಿನಲ್ಲಿರುವ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಅಂತರರಾಷ್ಟ್ರೀಯ ಸೈದ್ಧಾಂತಿಕ ಭೌತವಿಜ್ಞಾನಗಳ ಕೇಂದ್ರದಲ್ಲಿ(ಐಸಿಟಿಎಸ್‌-ಟಿಐಎಫ್‌ಆರ್‌)ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಇಟಲಿ ಮೂಲದ ಅಂತರರಾಷ್ಟ್ರೀಯ ಸೈದ್ಧಾಂತಿಕ ಭೌತವಿಜ್ಞಾನ ಕೇಂದ್ರ(ಐಸಿಟಿಪಿ)ವು ಈ ಮೆಡಲ್‌ ನೀಡುತ್ತಿದ್ದು, ಇತರ ನಾಲ್ವರು ವಿಜ್ಞಾನಿಗಳ ಜೊತೆ ಧರ್‌ ಅವರು ಈ ವರ್ಷದ ಮೆಡಲ್‌ಗೆ ಭಾಜನರಾಗಿದ್ದಾರೆ.

'ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್‌ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಧರ್ ಅವರನ್ನು ಈ ಮೆಡಲ್‌ಗೆ ಆಯ್ಕೆ ಮಾಡಲಾಗಿದೆ' ಎಂದು ಐಸಿಪಿಟಿ ತಿಳಿಸಿದೆ.

ಬರ್ನಾರ್ಡ್‌ ಡೆರಿಡಾ(ಫ್ರಾನ್ಸ್‌), ಮಾರ್ಕ್ ಮೆಜಾರ್ಡ್‌(ಇಟಲಿ) ಹಾಗೂ ಹೈಮ್ ಸೊಂಪೊಲಿನ್‌ಸ್ಕಿ(ಇಸ್ರೇಲ್‌ ಈ ಮೆಡಲ್‌ ಅನ್ನು ಹಂಚಿಕೊಂಡಿರುವ ಇತರ ವಿಜ್ಞಾನಿಗಳು.

'ಈ ವಿಜ್ಞಾನಿಗಳ ಸಂಶೋಧನೆಯನ್ನು ಜೀವವಿಜ್ಞಾನ, ಹಣಕಾಸು ಮಾರುಕಟ್ಟೆ ಹಾಗೂ ಕಂಪ್ಯೂಟರ್‌ ಸೈನ್ಸ್‌ನಿಂದ ಹಿಡಿದು ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರಕ್ಕೂ ಅನ್ವಯಿಸಬಹುದಾಗಿದೆ. ಈ ಕ್ಷೇತ್ರಗಳಲ್ಲಿನ ಸಂಕೀರ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಇವರ ಸಂಶೋಧನೆ ನೆರವಾಗಲಿದೆ' ಎಂದು ಐಸಿಟಿಪಿ ತಿಳಿಸಿದೆ.

'ಡಿರಾಕ್‌ ಮೆಡಲ್‌' ಅನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಸೈದ್ಧಾಂತಿಕ ಭೌತವಿಜ್ಞಾನ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದವರನ್ನು ಗುರುತಿಸಿ, ಈ ಮೆಡಲ್‌ ಅನ್ನು ಪ್ರದಾನ ಮಾಡಲಾಗುತ್ತದೆ.

ಧರ್‌ ಅವರು ಪದ್ಮಭೂಷಣ(2023), ಬೋಲ್ಟ್ಜ್‌ಮನ್ ಮೆಡಲ್‌(2022) ಹಾಗೂ ಶಾಂತಿ ಸ್ವರೂಪ ಭಟ್ನಾಗರ್(1991) ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries