ಪತ್ತನಂತಿಟ್ಟ: ಸಿಂಹಮಾಸ-ಓಣಂ ವಿಶೇಷ ಪೂಜೆಗಳ ಭಾಗವಾಗಿ ಶಬರಿಮಲೆ ದರ್ಶನಕ್ಕಾಗಿ ವರ್ಚುವಲ್ ಕ್ಯೂ ಬುಕಿಂಗ್ ಪ್ರಾರಂಭವಾಗಿದೆ.
ಭಕ್ತರು www.sabarimalaonline.org ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಸ್ಲಾಟ್‍ಗಳನ್ನು ಬುಕ್ ಮಾಡಬಹುದು. ಶಬರಿಮಲೆ ಸಿಂಹಮಾಸ ಪೂಜೆಗಳಿಗಾಗಿ ಆ.16 ರಿಂದ 21 ರವರೆಗೆ ಮತ್ತು ಓಣಂ ಸಂಬಂಧಿತ ಪೂಜೆಗಳಿಗಾಗಿ 24 ರಿಂದ 28 ರವರೆಗೆ ದೇವಾಲಯ ತೆರೆದಿರುತ್ತದೆ.

