ತಿರುವನಂತಪುರಂ: ಪ್ರಸಕ್ತ ಸಾಲಿನ (2026-27) ಮಂಡಲ-ಮಕರ ಬೆಳಕು ಮಹೋತ್ಸವಕ್ಕೆ ಸಂಬಂಧಿಸಿದಂತೆ ಶಬರಿಮಲೆಯಲ್ಲಿ ದಿನಗೂಲಿ ಉದ್ಯೋಗಾವಕಾಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 65 ವರ್ಷದೊಳಗಿನ ಹಿಂದೂ ಪುರುಷರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯು ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್‍ಸೈಟ್‍ನಲ್ಲಿ ಲಭ್ಯವಿದೆ (www. travan-coredevaswomboard.org). ವಯಸ್ಸು ಮತ್ತು ಧರ್ಮವನ್ನು ಸಾಬೀತುಪಡಿಸುವ ಪ್ರಮಾಣಪತ್ರದ ಪ್ರತಿ, ಮೂಲ ಪೋಲೀಸ್ ಪರಿಶೀಲನಾ ಪ್ರಮಾಣಪತ್ರ ಮತ್ತು ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಸೆಪ್ಟೆಂಬರ್ 16 ರಂದು ಸಂಜೆ 5 ಗಂಟೆಯ ಮೊದಲು ಮುಖ್ಯ ಎಂಜಿನಿಯರ್, ತಿರುವಾಂಕೂರು ದೇವಸ್ವಂ ಮಂಡಳಿ, ನಂದನ್‍ಕೋಡ್, ತಿರುವನಂತಪುರಂ 695003 ವಿಳಾಸಕ್ಕೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ: 91 9995041127.

