ಬದಿಯಡ್ಕ: ಸ್ವಾತಂತ್ರ್ಯ ಹೋರಾಟದ ಇತಿಹಾಸ ಕ್ವಿಜ್‍ನ ಪ್ರಶ್ನೆಯೊಂದರಲ್ಲಿ ವೀರ ಸಾವರ್ಕರ್ ಅವರ ಕುರಿತಾದ ಪ್ರಶ್ನೆಯನ್ನು ಸೇರಿಸಿದ್ದಾರೆ ಎಂದು ಆರೋಪಿಸಿ ಬದಿಯಡ್ಕ ಸಮೀಪದ ಪಳ್ಳತ್ತಡ್ಕ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸುವ ಕ್ರಮ ಕೈಗೊಂಡಿರುವ ಯುಡಿಎಫ್ ಸರ್ಕಾರದ ಧೋರಣೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟಿಸಿದೆ. ಬೇಳ ಕಡಂಬಳ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ವಿದ್ಯಾಭ್ಯಾಸ ಮಂತ್ರಿ ಶಂಸುದ್ದೀನ್ ವಿರುದ್ಧ ಘೋಷಣೆಯನ್ನು ಕೂಗಿದರು.
ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ. ಅವರು ನೇತೃತ್ವವನ್ನು ವಹಿಸಿ ಮಾತನಾಡಿ, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು ಗಮನಿಸಿದ ಮೇಲೆಯೇ ಪ್ರಶ್ನೆಪತ್ರಿಕೆಗಳನ್ನು ಶಾಲೆಗಳಿಗೆ ನೀಡಲಾಗುತ್ತದೆ. ಆದರೆ ಈ ಹೆಸರಿನಲ್ಲಿ ಕೇವಲ ಪಳ್ಳತ್ತಡ್ಕ ಶಾಲೆಯ ಶಿಕ್ಷಕರೋರ್ವರನ್ನು ಮಾತ್ರ ಅಮಾನತು ಮಾಡುವ ನಿರ್ಧಾರವನ್ನು ಕೈಗೊಂಡ ಮುಸ್ಲಿಂಲೀಗ್ ಕೈಗೊಂಬೆಯಾದ ಯುಡಿಎಫ್ ಸರ್ಕಾರದ ಕ್ರಮ ಖಂಡನೀಯ ಎಂದ ಅವರು ಸತ್ಯದ ವಿಚಾರಗಳನ್ನು ಎಂದೂ ಸುಳ್ಳಾಗಿಸಲು ಸಾಧ್ಯವಿಲ್ಲ ಎಂದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷರುಗಳಾದ ಉದನೇಶ್ವರ ಬಿ., ಮಹೇಶ್ ವಳಕ್ಕುಂಜ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ.ಎಂ., ಮಂಡಲ ಕಾರ್ಯದರ್ಶಿ ಅವಿನಾಶ್ ರೈ, ಪ್ರಮುಖರಾದ ರಾಮಪ್ಪ ಮಂಜೇಶ್ವರ, ವಕೀಲ ಗಣೇಶ್ ಬಿ., ಶಶಿಧರ ತೆಕ್ಕೆಮೂಲೆ, ಬಾಲಕೃಷ್ಣ ಶೆಟ್ಟಿ ಕಡಾರು, ರಜನಿ ಸಂದೀಪ್, ಶ್ಯಾಮಪ್ರಸಾದ ಸರಳಿ, ಪ್ರಶಾಂತ್ ಶೆಟ್ಟಿ ಬೇಳ, ಸುನಿಲ್ ಉಕ್ಕಿನಡ್ಕ, ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

.jpg)
.jpg)
