HEALTH TIPS

ದಿಲ್ಲಿ | ರಕ್ಷಣಾ ಸಚಿವಾಲಯದ ಮಹಿಳಾ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ : ಪತಿ ಮನೆಯವರ ವಿರುದ್ಧ ಕಿರುಕುಳ ಆರೋಪ

ನವದೆಹಲಿ:  ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗಾಧಿಕಾರಿಯಾಗಿದ್ದ ಮೂರು ತಿಂಗಳ ಗರ್ಭಿಣಿ ನಜಿಯಾ ಖಾನಂ (30) ಆ.21ರಂದು ದಿಲ್ಲಿಯ ದ್ವಾರಕಾದ ತನ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ಅಜ್ಮ್ ಅಲಿ ಖಾನ್ ಹಾಗೂ ಅತ್ತೆ-ಮಾವಂದಿರು ಆಕೆಗೆ ನಿರಂತರವಾಗಿ ಮಾನಸಿಕ ಮತ್ತು ಶಾರೀರಿಕ ಕಿರುಕುಳ ನೀಡುತ್ತಿದ್ದರೆಂದು ಹೆತ್ತವರು ಆರೋಪಿಸಿದ್ದಾರೆ.


ನಜಿಯಾರ ತಂದೆ ತೋವಾಬ್ ಖಾನ್ ನೀಡಿರುವ ದೂರಿನನ್ವಯ, ಪತಿ, ಅತ್ತೆ ಸಮೀನ್ ನಿಶಾ ಮತ್ತು ಮಾವ ಬಾಬರ್ ಅಲಿ ಖಾನ್ ಆಕೆಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಆದರೆ, ತಮ್ಮಿಬ್ಬರ ನಡುವೆ ಜಗಳವಾದ ಬಳಿಕ ಜಿಯಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಖಾನ್ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಬಿಎನ್‌ಎಸ್‌ನ 85 ಮತ್ತು 108ನೇ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ತಂದೆ ಮಾಜಿ ಪೋಲಿಸ್ ಸಿಬ್ಬಂದಿಯಾಗಿರುವುದರಿಂದ ವರದಕ್ಷಿಣೆ ನಿಷೇಧೆ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ ಹಾಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ನಜಿಯಾ ಕುಟುಂಬ ಆರೋಪಿಸಿದೆ. ಆದರೆ, ಆರಂಭಿಕ ಹೇಳಿಕೆಯಲ್ಲಿ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯು ಟ್ವಿಶಾ ಶರ್ಮಾ ಸಾವಿನ ಪ್ರಕರಣದ ನೆನಪನ್ನು ಮರುಕಳಿಸಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಮರ್ಥ ಸಿಂಗ್ ಎಂಬಾತನನ್ನು ಮದುವೆಯಾಗಿದ್ದ ಟ್ವಿಶಾ ಮೇ 12ರಂದು ಭೋಪಾಲ್‌ನಲ್ಲಿ ತನ್ನ ತವರು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗಂಡನ ಮನೆಯವರ ಕಿರುಕುಳ ಆತ್ಮಹತ್ಯೆಗೆ ಕಾರಣ ಎಂದು ಆಕೆಯ ಹೆತ್ತವರು ಆರೋಪಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries