HEALTH TIPS

ಅಮೆರಿಕದ ಗಾಝಾ ಯೋಜನೆ ತಿರಸ್ಕರಿಸಿದ ನೆತನ್ಯಾಹು

ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದ ಗಾಝಾ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ತಿರಸ್ಕರಿಸಿದ್ದು, ಹಮಾಸ್ ನಿಜವಾಗಿಯೂ ನಿರಾಯುಧಗೊಳ್ಳುವವರೆಗೆ ಮಿಲಿಟರಿ ವಾಪಸಾತಿ ಇರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. 


ಜುಲೈ ಕೊನೆಯಲ್ಲಿ ಹಮಾಸ್ ಅನುಮೋದಿಸಿದ ಯೋಜನೆಯನ್ನು ಉಲ್ಲೇಖಿಸಿ, `ಇಸ್ರೇಲ್ ಈ 15 ಅಂಶಗಳ ದಾಖಲೆಯನ್ನು ತಿರಸ್ಕರಿಸುತ್ತದೆ. ಹಮಾಸ್ ನಿಜವಾಗಿಯೂ ನಿರಾಯುಧಗೊಳ್ಳುವವರೆಗೆ ಇಸ್ರೇಲ್ ಮಿಲಿಟರಿ ಯಾವುದೇ ಹಿಂತೆಗೆತವನ್ನು ಮಾಡುವುದಿಲ್ಲ. ಜೊತೆಗೆ ನಮ್ಮ ಪಡೆಗಳು ಮತ್ತು ನಮ್ಮ ರಕ್ಷಣೆಗೆ ಎದುರಾಗುವ ಬೆದರಿಕೆಗಳನ್ನು ತಡೆಯುವುದನ್ನು ಮುಂದುವರಿಸುತ್ತದೆ' ಎಂದು ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು ಹೇಳಿದರು.

`ಇಸ್ರೇಲ್ ತನ್ನ ಆಕ್ಷೇಪಣೆಗಳ ಬಗ್ಗೆ ಅಮೆರಿಕದ ಜೊತೆ ಮಾತನಾಡುತ್ತಿದೆ. ಅವರ ಬಳಿ ಕೆಲವು ಕಲ್ಪನೆಗಳಿವೆ. ಅವುಗಳಲ್ಲಿ ಕೆಲವು ನಮಗೆ ಸ್ವೀಕಾರಾರ್ಹವಾಗಿವೆ ಮತ್ತು ಕೆಲವು ಸ್ವೀಕಾರಾರ್ಹವಲ್ಲ. ಈ ವಿಷಯಗಳಲ್ಲಿ ನಮ್ಮ ನಿಲುವನ್ನು ಹೇಗೆ ಎತ್ತಿ ಹಿಡಿಯಬೇಕು ಎಂಬುದು ನಮಗೆ ತಿಳಿದಿದೆ' ಎಂದು ನೆತನ್ಯಾಹು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries