ಕಾಸರಗೋಡು: ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವೀಡಿಯೊ ಜಿಲ್ಲಾ ಮಾಹಿತಿ ಕಚೇರಿಯಲ್ಲಿ ವೀಡಿಯೊ ವೀಡಿಯೊ ಸ್ಟ್ರಿಂಜರ್ ಗಳ ಸಮಿತಿ ರಚಿಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಪ್ರಿ-ಡಿಗ್ರಿ ಅಥವಾ ಪ್ಲಸ್-ಟು (12ನೇ ತರಗತಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅವರು ತಮ್ಮದೇ ಆದ 'ಫುಲ್ ಎಚ್‍ಡಿ' (FULL HD) ವೃತ್ತಿಪರ ಕ್ಯಾಮೆರಾ ಮತ್ತು ಆಧುನಿಕ ಪೂರಕ ಉಪಕರಣ ಹೊಂದಿದ್ದು, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿರಬೇಕು. ಸುದ್ದಿ ವರದಿಗಳ ಚಿತ್ರೀಕರಣ, ಸಂಪಾದನೆ ಮತ್ತು ಧ್ವನಿ ನೀಡುವಿಕೆಯಲ್ಲಿ (voice-over) ಕನಿಷ್ಠ ಒಂದು ವರ್ಷದ ಅನುಭವ ಅಗತ್ಯ.
ವೈಯಕ್ತಿಕ ಎಡಿಟಿಂಗ್ ಸೆಟ್-ಅಪ್(ಎಡಿಟಿಂಗ್ ಸ್ಯೂಟ್)ಹೊಂದಿರುವಿಕೆ ಹಾಗೂ ಅತ್ಯಾಧುನಿಕ 'ಎಲೆಕ್ಟ್ರಾನಿಕ್ ನ್ಯೂಸ್ ಗ್ಯಾದರಿಂಗ್(ಇಎನ್‍ಜಿ) ಸೌಲಭ್ಯ ಬಳಸುವ ಅವಕಾಶವನ್ನು ಹೆಚ್ಚುವರಿ ಅರ್ಹತೆಯಾಗಿ ಪರಿಗಣಿಸಲಾಗುವುದು. ನೇರ ವಿಡಿಯೋ ಪ್ರಸಾರಕ್ಕೆ ಸಮರ್ಥವಾದ, ಬೆನ್ನಿಗೇರಿಸಿಕೊಳ್ಳಬಹುದಾದ (ಬ್ಯಾಕ್‍ಪ್ಯಾಕ್ ಮಾದರಿಯ) ಸಾಧನಗಳಂತಹ ಸ್ವಂತ ಪೆÇೀರ್ಟಬಲ್ ವಿಡಿಯೋ ಪ್ರಸಾರ ವ್ಯವಸ್ಥೆಗಳನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿದಾರರು ಆಯಾ ಜಿಲ್ಲೆಯ ಕಾಯಂ ನಿವಾಸಿಗಳಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾಗಿರಬಾರದು ಅಥವಾ ಯಾವುದೇ ಬಾಕಿ ಇರುವ ಅಪರಾಧ ಪ್ರಕರಣಗಳು ಅಥವಾ ಆರೋಪಗಳು ಇರಬಾರದು. ಅಲ್ಲದೆ, ಅರ್ಜಿದಾರರು ತಮ್ಮ ಸ್ಥಳೀಯ ಪೆÇಲೀಸ್ ಠಾಣೆಯ ಠಾಣಾಧಿಕಾರಿಯಿಂದ ನಡವಳಿಕೆ ಪ್ರಮಾಣಪತ್ರ ಹಾಗೂ ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ ಎಂಬುದನ್ನು ದೃಢೀಕರಿಸುವ ದಾಖಲೆಯನ್ನು ಪಡೆಯುವುದು ಕಡ್ಡಾಯವಾಗಿದ್ದು, ಇದನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಅರ್ಜಿಯನ್ನು 2026ರ ಆಗಸ್ಟ್ 7ರಂದು ಸಂಜೆ 5ರ ಮುಂಚಿತವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಮಾಹಿತಿ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅರ್ಜಿಯೊಂದಿಗೆ ಅಭ್ಯರ್ಥಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್, ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವದ ವಿವರಗಳನ್ನು ಒಳಗೊಂಡ ಬಯೋಡೇಟಾ ಹಾಗೂ ಅಭ್ಯರ್ಥಿಯು ಹೊಂದಿರುವ ಕ್ಯಾಮೆರಾದ ವಿವರಗಳನ್ನು ಲಗತ್ತಿಸಬೇಕು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಈಗಾಗಲೇ ಅರ್ಜಿ ಸಲ್ಲಿಸಿರುವವರು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಜಿಲ್ಲಾ ಮಾಹಿತಿ ಅಧಿಕಾರಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಿವಿಲ್ ಸ್ಟೇಷನ್, ವಿದ್ಯಾನಗರ, ಕಾಸರಗೋಡು ಎಂಬ ವಿಳಾಸಕ್ಕೆ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ(04994 255145)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

