ಕಾಸರಗೋಡು: ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮಹಿಳಾ ಸಿಬ್ಬಂದಿ ಎಡನೀರು ಬಳಿಯ ಅದ್ರುಗುಳಿ ನಿವಾಸಿ ಆಶಾಲತಾ(41) ಭಾನುವಾರ ಕೋಯಿಕ್ಕೋಡಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶುಕ್ರವಾರ ಇವರನ್ನು ಅಸೌಖ್ಯಗೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಮೊದಲಿಗೆ ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದಾಗ ಐಸ್‍ಕ್ರೀಂ ಜೊತೆ ಇಲಿವಿಷ ಸೇವಿಸಿರುವುದು ಖಚಿತಗೊಂಡಿತ್ತು. ಅನಂತರ ಉನ್ನತ ಚಿಕಿತ್ಸೆಗಾಗಿ ಕೋಯಿಕ್ಕೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವಿಗೂ ಮೊದಲು ಆಶಾಲತಾ ಅವರಿಂದ ಪೆÇಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.


