HEALTH TIPS

ಜೆರ್ಸಿ ಹಸು, ಕಾಂಗ್ರೆಸ್ ವಿಧವೆ... ಇದು ನಿಂದನೆಯಲ್ಲವೇ? ಮೋದಿಗೆ CJP ತಿರುಗೇಟು

ನವದೆಹಲಿ: ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿ ವಿರುದ್ಧ ಅಶ್ಲೀಲ ಪದಗಳಿಂದ ನಿಂದಿಸಲಾಗಿದೆ ಎಂದು ಮನನೊಂದು ಆಡಿದ ಪ್ರಧಾನಿ ಮೋದಿ ಮಾತುಗಳಿಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತಿರುಗೇಟು ನೀಡಿದೆ. 


ಮೋದಿಯರು ಈ ಹಿಂದೆ ನೀಡಿದ್ದ ವಿವಾದಾತ್ಮಕ ರಾಜಕೀಯ ಹೇಳಿಕೆಗಳನ್ನು ಉಲ್ಲೇಖಿಸಿ 'ನಿಜಕ್ಕೂ ಇವೇ ಅತ್ಯಂತ ಅಸಭ್ಯ, ಅಸಹ್ಯಕರ ನಿಂದನೆಗಳು' ಎಂದು ಹೇಳಿದೆ.

ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಹಂಚಿಕೊಂಡಿದ್ದ ಸೆಲ್ಫಿ ವಿಡಿಯೊವನ್ನು 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ, 'ಜೆರ್ಸಿ ಹಸು', '50 ಕೋಟಿಯ ಗೆಳತಿ', 'ಕಾಂಗ್ರೆಸ್‌ನ ವಿಧವೆ', 'ಹೈಬ್ರಿಡ್ ಕರು' ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಭಾಷಣದಲ್ಲಿ ಹೇಳಿದ್ದ ಪದಗಳನ್ನು ಉಲ್ಲೇಖಿಸಿದೆ.

ಜಂತರ್ ಮಂತರ್ ಪ್ರತಿಭಟನೆ ವೇಳೆ ತಮ್ಮ ವಿರುದ್ಧ ಮಾತ್ರವಲ್ಲದೆ ತಮ್ಮ ದಿವಂಗತ ತಾಯಿಯ ವಿರುದ್ಧವೂ ಅಸಭ್ಯ ಭಾಷೆ ಬಳಸಲಾಗಿದೆ. ನಮ್ಮ ಹೆಣ್ಣುಮಕ್ಕಳು ಇಂತಹ ಭಾಷೆ ಬಳಸಿರುವುದು ಸಾಂಸ್ಕೃತಿಕ ಆಘಾತ ತಂದಿದೆ. ದಾರಿ ತಪ್ಪಿದ ಯುವಕರನ್ನು ಶಿಕ್ಷಿಸುವ ಬದಲು ಕ್ಷಮಿಸಿ ಸರಿದಾರಿಗೆ ತರಬೇಕು ಎಂದು ಕರೆ ನೀಡಿದ್ದರು.

2004ರ ಚುನಾವಣಾ ಪ್ರಚಾರದ ವೇಳೆ ಸೋನಿಯಾ ಗಾಂಧಿ ಕುರಿತು ಮೋದಿ 'ಜೆರ್ಸಿ ಹಸು' ಎಂದು ಮೂದಲಿಸಿದ್ದರು. 2012ರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಕುರಿತು '50 ಕೋಟಿಯ ಗೆಳತಿ' ಎಂದು ಲೇವಡಿ ಮಾಡಿದ್ದರು. 2018ರ ಚುನಾವಣಾ ಭಾಷಣದಲ್ಲಿ 'ಕಾಂಗ್ರೆಸ್‌ನ ವಿಧವೆ' ಎಂದು ಹೇಳಿದ್ದರು. ಇದು ಸೋನಿಯಾ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಹೇಳಲಾಗಿದೆ ಎನ್ನುವ ಆರೋಪ ಇದೆ. 2018ರಲ್ಲಿ ಬಳಸಿದ್ದ 'ಹೈಬ್ರಿಡ್ ಕರು' ಹೇಳಿಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಎನ್ನುವುದು ಆರೋಪ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries