HEALTH TIPS

ಮಣಿಪುರ: 2 ಮನೆಗಳಿಗೆ ಬೆಂಕಿ ಹಚ್ಚಿದ ಉಗ್ರರು; ಭದ್ರತಾ ಪಡೆ ಜೊತೆ ಗುಂಡಿನ ಚಕಮಕಿ

ಇಂಫಾಲ: ಮಣಿಪುರದಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಕಾಂಗ್‌ಪೋಕ್ಷಿ ಜಿಲ್ಲೆಯ ಬೆಟ್ಟದ ಮೇಲಿರುವ ಗ್ರಾಮವೊಂದರ ಮೇಲೆ ಶಂಕಿತ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದು, ಭದ್ರತಾ ಪಡೆ ಜೊತೆ ಗುಂಡಿನ ಚಕಮಕಿ ನಡೆಸಿದ್ದಾರೆ.


ತಮೆಂಗ್‌ಲಾಂಗ್ ಜಿಲ್ಲೆಯ ಲೈಸಂಗ್‌ಫೈನಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. 

ಅದಾದ, ಕೆಲವೇ ಗಂಟೆಗಳಲ್ಲಿ ಮಂಗಳವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ಚವಾಂಗ್‌ಕಿನಿಂಗ್ ನಾಗಾ ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್ ಸಿಬ್ಬಂದಿ, ಉಗ್ರರ ಮೇಲೆ ಪ್ರತಿ ದಾಳಿ ನಡೆಸಿದರು ಎಂದು ಅವರು ತಿಳಿಸಿದ್ದಾರೆ.

'ಬುಧವಾರ ಮುಂಜಾನೆ 4.30ರವರೆಗೆ, ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಸಿಆರ್‌ಪಿಎಫ್ ಪಡೆಯ ಪ್ರತಿದಾಳಿಗೆ ಬೆಚ್ಚಿದ ಉಗ್ರರು ಗ್ರಾಮದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೂ, ಗ್ರಾಮದ ಹೊರವಲಯದಲ್ಲಿದ್ದ ಎರಡು ಮರದ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ'ಎಂದು ಅಧಿಕಾರಿ ಹೇಳಿದ್ದಾರೆ.

ರಾತ್ರಿ 10.30ರ ಸುಮಾರಿಗೆ ನಮ್ಮ ಗ್ರಾಮದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಬೆಳಗಗಿನ ಜಾವದವರೆಗೆ ಗುಂಡಿನ ಕಾಳಗ ನಡೆದಿತ್ತು. ಸಿಆರ್‌ಪಿಎಫ್ ತುಕಡಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries