ತಿರುವನಂತಪುರಂ: ರಿಪೋರ್ಟರ್ ಟಿವಿ ಮಾಧ್ಯಮದ ಪ್ರಧಾನ ಕಚೇರಿಯ ಮೇಲೆ ಪೋಲೀಸರು ದಾಳಿ ನಡೆಸಿ ಲೆಕ್ಕವಿಲ್ಲದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಶೋಧದ ಸಮಯದಲ್ಲಿ 6300 ಯುಎಸ್ ಡಾಲರ್ ವಶಪಡಿಸಿಕೊಳ್ಳಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಕಾನೂನುಬದ್ಧವಾಗಿ 2000 ಯುಎಸ್ ಡಾಲರ್‍ಗೆ ಸಮಾನವಾದ ಗರಿಷ್ಠ ಮೊತ್ತವನ್ನು ಮಾತ್ರ ಹೊಂದಬಹುದು.
ಈ ಮಿತಿಯನ್ನು ಮೀರಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಕರೆನ್ಸಿಯನ್ನು ಹೊಂದಿರುವುದು ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಪತ್ತೆಯಾದ ವಿದೇಶಿ ಕರೆನ್ಸಿಯ ಮೂಲದ ಬಗ್ಗೆ ಪೆÇಲೀಸರು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಾಧ್ಯಮ ಸಂಸ್ಥೆಯ ಹಣಕಾಸು ವಹಿವಾಟುಗಳ ಮೇಲೂ ಪರಿಶೀಲನೆಗಳನ್ನು ತೀವ್ರಗೊಳಿಸಲಾಗಿದೆ.

