ಚಂಡಿಗಢ: ಅಮೃತಸರದಲ್ಲಿ ಪಂಜಾಬ್ ಪೊಲೀಸ್‌ನ ಂSI ಹರ್ಜೀತ್ ಸಿಂಗ್ ಅವರನ್ನು ಹತ್ಯೆಗೈದ ಆರೋಪಿಗಳಲ್ಲಿ ಒಬ್ಬ ಥಂಡಾ ರಸ್ತೆಯ ಚೆಕ್‌ಪೋಸ್ಟ್ ನಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್ ನಲ್ಲಿ ಹತ್ಯೆಯಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಎಎಸ್‌ಐ ಹರ್ಜೀತ್ ಸಿಂಗ್ ಅವರ ಹತ್ಯೆಯನ್ನು ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ''ಪಾಕಿಸ್ತಾನದ ವ್ಯಕ್ತಿಯೊಬ್ಬ'' ಯೋಜಿಸಿದ್ದ ಎಂದು ತನಿಖೆಯಲ್ಲಿ ಸುಳಿವು ಸಿಕ್ಕಿದೆ ಎಂದು ವರದಿಯಾಗಿದೆ.
ಕೊಲೆಯ ಸಂಚು ರೂಪಿಸಿದ್ದ ''ಪಾಕಿಸ್ತಾನದ ವ್ಯಕ್ತಿ'' ಆರೋಪಿಗಳಿಗೆ ಹಣ ಮತ್ತು ಮಾದಕ ದ್ರವ್ಯ ಜಾಲದಲ್ಲಿ ಪಾಲು ನೀಡುವುದಾಗಿ ಆಮಿಷ ಒಡ್ಡಿದ್ದ ಎಂದು ಅಮೃತಸರ ಪೊಲೀಸ್ ಆಯುಕ್ತ ಹರ್ಮನ್‌ಬೀರ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಅಮೃತಸರದ ಹಕೀಮಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ASI) ಹರ್ಜೀತ್ ಸಿಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

