ಬದಿಯಡ್ಕ: ನೀರ್ಚಾಲು ಕಿಳಿಂಗಾರಿನ ಯುವಕೇಸರಿ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್‍ನ ವತಿಯಿಂದ ವಿವಿಧ ವಿಭಾಗದಲ್ಲಿ ಗಣೇಶನ ಚಿತ್ರ ರಚನೆ ಸ್ಪರ್ಧೆ ಕ್ಲಬ್ಬಿನ ಉಪಾಧ್ಯಕ್ಷ ಉದಯ ಕೆ. ಅಧ್ಯಕ್ಷತೆಯಲ್ಲಿ ಜರಗಿತು. ಧಾರ್ಮಿಕ ಮುಂದಾಳು ಶ್ಯಾಮ ಆಳ್ವ ವಿದ್ಯಾಗಿರಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಏಕಲವ್ಯ ಬಾಲಗೋಕುಲದ ಮಾತಾಶ್ರಿಗಳಾದ ಸಹನ ಹಾಗೂ ಕುಮಾರಿ ಸುಪ್ರಭಾ ಶುಭ ಹಾರೈಸಿದರು. ಕ್ಲಬ್ಬಿನ ಸಂಚಾಲಕ ನಾರಾಯಣ.ಪಿ ಪೆರಡಾಲ ಸ್ವಾಗತಿಸಿ, ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಎಲ್.ಪಿ. ವಿಭಾಗದಲ್ಲಿ ಪ್ರಥಮ ತನುಷ್ ಸಿ ಎಸ್, ಜಿಯಚ್‍ಎಸ್ ಸೂರಂಬೈಲ್, ದ್ವಿತೀಯ ವಿಶಾಖ್ ತೇಜ. ಎ.ಎಸ್.ಬಿ.ಎಸ್. ಬೇಳ, ತೃತೀಯ ಕಾರ್ತಿಕ್. ಎ.ಎಸ್.ಬಿ.ಎಸ್. ಬೇಳ, ಯುಪಿ ವಿಭಾಗದಲ್ಲಿ ಅದ್ವೈತ್ ಎ. ಎ.ಎಸ್.ಬಿ.ಎಸ್. ಬೇಳ, ದ್ವಿತೀಯ ಶಾರ್ವಿ ಯಂ. ಎಂ.ಎಸ್.ಸಿ.ಯಚ್.ಎಸ್. ನೀರ್ಚಾಲ್, ತೃತೀಯ ಸಾಧ್ವಿಕೃಷ್ಣ. ಎ.ಎಸ್.ಬಿ.ಯಸ್. ಬೇಳ, ಹೈಸ್ಕೂಲ್ ವಿಭಾಗ ಪ್ರಥಮ ಅಭಿಷೇಕ್ ಬಿ. ಎಂ.ಎಸ್.ಸಿ.ಯಚ್.ಎಸ್. ನೀರ್ಚಾಲ್, ದ್ವಿತೀಯ ಶ್ರೀಷ್ಮ ಎ. ಎನ್.ಎಚ್.ಎಸ್. ಪೆರಡಾಲ, ತೃತೀಯ ಪವನ್ ಕೆ. ಎಂ.ಎಸ್.ಸಿ.ಎಚ್.ಎಸ್.ನೀರ್ಚಾಲು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮಂಜುನಾಥ ಪೆರಿಯಡ್ಕ ಪ್ರಥಮ, ಚಂದ್ರೇಶ ಬೇರಿಗೆ ದ್ವಿತೀಯ ಬಹುಮಾನವನ್ನು ಪಡೆದರು. ಬಹುಮಾನ ವಿತರಣೆಯು ಕ್ಲಬ್ಬಿನ ಅ`ಧ್ಯಕ್ಷ ಸುಧಾಕರ ಎ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತೀರ್ಪುಗಾರರಾದ ಮೋಹನ್ ದಾಸ್ ಅನ್ನೆಪಳ್ಳಡ್ಕ ಬಹುಮಾನ ವಿತರಿಸಿದರು. ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಎಂ. ವಂದಿಸಿದರು. ಕ್ಲಬ್ಬಿನ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

.jpg)
