HEALTH TIPS

ಸಂರಕ್ಷಣೆ-ಅಭಿವೃದ್ಧಿಯ ಮಧ್ಯೆ ಸಮತೋಲನ ಇರಲಿ: ಸಿಜೆಐ ಸೂರ್ಯಕಾಂತ್‌

ನವದೆಹಲಿ: ಭಾರತೀಯ ನ್ಯಾಯಾಲಯಗಳ ಮುಂದಿರುವ ಪ್ರಶ್ನೆ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ಹೋರಾಟವಲ್ಲ; ಬದಲಿಗೆ ಇವೆರಡನ್ನೂ ಒಟ್ಟಿಗೆ ಸುಸ್ಥಿರವಾಗಿ ಕೊಂಡೊಯ್ಯುವುದು ಹೇಗೆ ಎಂಬುದಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಶನಿವಾರ ಹೇಳಿದರು.


'ಸುಪ್ರೀಂ ಕೋರ್ಟ್‌ ಪರಿಸರ ನ್ಯಾಯದ 'ಆಲದ ಮರ' ಇದ್ದಂತೆ. ಅದರ ಬೇರುಗಳು ನಮ್ಮ ನಾಗರಿಕತೆಯ ಮೂಲತತ್ತ್ವಗಳಲ್ಲಿ ಆಳವಾಗಿ ಬೇರೂರಿವೆ ಮತ್ತು ರೆಂಬೆ-ಕೊಂಬೆಗಳು ಕಾಣದ ಪೀಳಿಗೆಗಳಿಗೆ ಆಸರೆಯಾಗಿವೆ' ಎಂದು ಹೇಳಿದರು.

'ಪರಿಸರದ ಭವಿಷ್ಯ ಮತ್ತು ಹವಾಮಾನ ಡೈನಾಮಿಕ್ಸ್‌' ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಸಿಜೆಐ ಸೂರ್ಯಕಾಂತ್‌ ಮಾತನಾಡಿದರು.

ಸುಪ್ರೀಂ ಕೋರ್ಟ್‌ನ ನಾಲ್ಕು ದಶಕಗಳ ಪರಿಸರದ ನ್ಯಾಯತತ್ತ್ವವನ್ನು ಗಮನಿಸಿದರೆ, ಪರಿಸರ ಸಂರಕ್ಷಣೆಗೆ ಒಂದೇ ಒಂದು ಸಾಂವಿಧಾನಿಕ ಮಾರ್ಗವಿಲ್ಲ ಎಂದು ತಿಳಿಯುತ್ತದೆ ಎಂದು ಸೂರ್ಯಕಾಂತ್‌ ಹೇಳಿದರು. ಇದೇ ಸಂದರ್ಭದಲ್ಲಿ 'ಕಾಪಿ-ಪೇಸ್ಟ್' (ಯಥಾವತ್ತು ನಕಲು ಮಾಡುವ) ತೀರ್ಪುಗಳ ವಿರುದ್ಧ ಎಚ್ಚರಿಕೆ ನೀಡಿದರು.

'ಚಳವಳಿಯು ಪರಿಸರ ಹಕ್ಕುಗಳಿಂದ ಹವಾಮಾನ ಸಂಬಂಧಿತ ಹಕ್ಕುಗಳತ್ತ ಬದಲಾಗುತ್ತಿದೆ. ಎರಡನೇ ಬದಲಾವಣೆ ಎಂದರೆ, ಪರಿಸರ ಹಾನಿಯನ್ನು ಪ್ರತ್ಯೇಕವಾಗಿ ಪರಿಶೀಲಿಸುವುದಕ್ಕಿಂತ, ಒಟ್ಟಾರೆ ಪರಿಸರ ಹಾನಿಯನ್ನು ಅರ್ಥಮಾಡಿಕೊಳ್ಳುವ ಕಡೆಗೆ ಗಮನ ನೀಡಲಾಗುತ್ತಿದೆ' ಎಂದು ಅಭಿಪ್ರಾಯಪಟ್ಟರು.

'ಆಡಳಿತದ ಪ್ರಕಾರ ನದಿಯೊಂದು ಮಲಿನಗೊಳ್ಳುವುದಿಲ್ಲ. ಅರಣ್ಯಕ್ಕೆ ಯೋಜನೆಗಳ ನಡುವಿ ವ್ಯತ್ಯಾಸ ತಿಳಿಯದು. ವಾತಾವರಣವು ರಾಷ್ಟ್ರೀಯ ಗಡಿ ಗುರುತಿಸುವುದಿಲ್ಲ. ಆದ್ದರಿಂದ ಹವಾಮಾನ ಕುರಿತ ನ್ಯಾಯನಿರ್ಣಯ ಸಂದರ್ಭದಲ್ಲಿ ತಕ್ಷಣದ ಪ್ರಸ್ತಾವದ ಆಚೆಗೆ ಸೂಕ್ಷ್ಮವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು' ಎಂದು ಪ್ರತಿಪಾದಿಸಿದರು.

'ಭಾರತದ ಸಂವಿಧಾನವು ಗತಕಾಲ, ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗಳೊಂದಿಗೆ ಮಾಡಿಕೊಂಡಿರುವ ಒಂದು ನೈತಿಕ ಒಡಂಬಡಿಕೆ. ಸಂವಿಧಾನದ 48ಎ ವಿಧಿಯು ರಾಜ್ಯಗಳು ಪರಿಸರವನ್ನು ರಕ್ಷಿಸಿ ಬೆಳೆಸಬೇಕು ಎಂದು ಹೇಳುತ್ತದೆ. ಹಾಗೆಯೇ 51ಎ ವಿಧಿ ನಿಸರ್ಗವನ್ನು ರಕ್ಷಿಸುವುದು ನಾಗರಿಕರ ಕರ್ತವ್ಯ ಎಂದು ಪ್ರತಿಪಾದಿಸುತ್ತದೆ' ಎಂದು ತಿಳಿಸಿದರು.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries