HEALTH TIPS

ಕೇರಳ ರಾಜ್ಯ ಪೆನ್ಶನರ್ಸ್ ಸಂಘದ ಚೆಂಗಳ ಘಟಕ ಸಮಾವೇಶ

ಬದಿಯಡ್ಕ: ಕೇರಳ ರಾಜ್ಯ ಪೆನ್ಶನರ್ಸ್  ಸಂಘದ ಚೆಂಗಳ ಘಟಕದ ಸಮಾವೇಶ ಬುಧವಾರ ಎಡನೀರು ಸ್ವಾಮಿಜೀಸ್ ಪ್ರೌಢಶಾಲೆಯಲ್ಲಿ ನಡೆಯಿತು. ರಾಜೇಂದ್ರನ್ ಕುಂಟಾರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಎಡಬಲ ರಂಗಗಳ ಒಪ್ಪಂದ ರಾಜಕೀಯ ಕೇರಳ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಿದೆ. ಸರ್ಕಾರಿ ಉದ್ಯೋಗಿಗಳ ಹಾಗೂ ಅಧ್ಯಾಪಕರ ಹಕ್ಕುಗಳನ್ನು ನಿಷೇಸುವುದರ ಜೊತೆಗೆ ಪಿಂಚಣಿದಾರರನ್ನು ಅವಗಣಿಸುವ ನೀತಿಯನ್ನು ಖಂಡಿಸಿ ಸಂಘಟನೆಯು ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಮಾತ್ರ ಮರಳಿ ಪಡೆಯಲು ಸಾಧ್ಯ ಎಂದು ನುಡಿದರು. 


ಬಲರಾಮ ಭಟ್ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತಾರಗೊಳಿಸುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಸಜ್ಜರಾಗಬೇಕಾಗಿದೆ ಎಂದು ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷ ಪಿ. ಎಸ್. ರಾವ್ ಶುಭ ಹಾರೈಸಿದರು. ವೆಂಕಟರಮಣ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಗಂಗಾಧರ ನೆಕ್ರಾಜೆ ಸ್ವಾಗತಿಸಿ, ಶಾರದಾ ಮೊಳೆಯಾರ್ ವಂದಿಸಿದರು. ಕೃಷ್ಣೋಜಿ ರಾವ್ ನಿರೂಪಿಸಿದರು. ಮಹಾಲಿಂಗೇಶ್ವರ ಶರ್ಮ, ಕೃಷ್ಣನ್ ನಂಬೂದಿರಿ, ಶಾರದಾ ಟೀಚರ್ ಮಾತನಾಡಿದರು. ಸದಸ್ಯರು ಪಾಲ್ಗೊಂಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries