ಬದಿಯಡ್ಕ: ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ರಾಮಲೀಲಾ ಸಭಾ ಭವನದಲ್ಲಿ ನೆರವೇರಿತು. ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ, ವ್ಯವಸ್ಥಾಪಕ ಡಾ. ಶ್ರೀಶ ಪಂಜಿತ್ತಡ್ಕ ಕಾರ್ಯಕ್ರಮದ ಹಿನ್ನೆಲೆ, ಸಂಸ್ಥೆಯ ಇತಿಹಾಸ, ಕಾರ್ಯವ್ಯಾಪ್ತಿ, ಕಾರ್ಯಚಟುವಟಿಕೆಗಳ ವಿವರ ಹಾಗೂ ಉದ್ದೇಶವನ್ನು ವಿವರಿಸುವ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.
'ರಂಗಸಿರಿ'ಯ ಅಧ್ಯಕ್ಷೆ, ನಿವೃತ್ತ ಶಿಕ್ಷಕಿ ಪ್ರಭಾವತಿ ಕೆದಿಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ 'ರಂಗಸಿರಿ ಸಮೃದ್ಧಿ ನಿಧಿ' ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾರ್ಗದರ್ಶನವನ್ನು ನೀಡಿದರು. ರಾಮಲೀಲಾದ ಮಾಲಿಕ ಲಕ್ಷ್ಮಣ ಪ್ರಭು ಕರಿಂಬಿಲ ಶುಭಾಶಂಸನೆಗೈದರು. ಸಂಸ್ಥೆಯ ವಿದ್ಯಾರ್ಥಿ ಆಸ್ತಿಕ್ ಆಳ್ವ ಪ್ರಾರ್ಥನೆ ಹಾಡಿದರು. ಅಧ್ಯಾಪಕ ನಿರಂಜನ್ ಸ್ವಾಗತಿಸಿ, ಕು. ಅಭಿಜ್ಞಾ ಭಟ್ ಬೊಳುಂಬು ವಂದಿಸಿದರು. ಸಂಸ್ಥೆಯ ಸದಸ್ಯ ಶಶಿಧರ ಕುದಿಂಗಿಲ ನಿರೂಪಿಸಿದರು.

.jpg)
