HEALTH TIPS

ಇಸ್ರೇಲ್-ಫೆಲೆಸ್ತೀನ್ ಶಾಶ್ವತ ಶಾಂತಿಗೆ ದ್ವಿ-ರಾಷ್ಟ್ರ ಪರಿಹಾರವೇ ಮಾರ್ಗ : ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಹೇಳಿಕೆ

ವಿಶ್ವಸಂಸ್ಥೆ: ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ `ದ್ವಿ-ರಾಷ್ಟ್ರ ಪರಿಹಾರ' (ಎರಡು ಪ್ರತ್ಯೇಕ ರಾಷ್ಟ್ರಗಳ ರಚನೆ) ಬೆಂಬಲಿಸುವುದಾಗಿ ಭಾರತ ಮತ್ತೆ ಪುನರುಚ್ಚರಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗಲು ಪ್ರತ್ಯೇಕ ಇಸ್ರೇಲ್ ಮತ್ತು ಫೆಲೆಸ್ತೀನ್ ರಾಷ್ಟ್ರಗಳ ನಿರ್ಮಾಣ ಅಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.


ವಿಶ್ವಸಂಸ್ಥೆಯ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು `ಸುದೀರ್ಘ ಮತ್ತು ಶಾಶ್ವತ ಶಾಂತಿಗೆ ದ್ವಿ-ರಾಷ್ಟ್ರ ಪರಿಹಾರ ಅತ್ಯಗತ್ಯ ಎಂದು ನಾವು ಬಲವಾಗಿ ನಂಬುತ್ತೇವೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ನಡುವೆ ಫೆಲೆಸ್ತೀನ್ ಜನರಿಗೆ ಮಾನವೀಯ ನೆರವು ಮತ್ತು ಪರಿಹಾರ ಕಾರ್ಯಗಳಲ್ಲಿ ಭಾರತ ತನ್ನ ಕೊಡುಗೆಯನ್ನು ನೀಡುತ್ತಿದೆ' ಎಂದರು.

ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳಿಂದ ದೂರವಿರುವ ದೇಶಗಳೂ ಸಹ ಅದರ ಪರಿಣಾಮ ಎದುರಿಸುತ್ತಿವೆ. ಅಂತ್ಯವಿಲ್ಲದ ಯುದ್ಧವು ಈಗ ಸಂಘರ್ಷದ ಅಂತ್ಯಕ್ಕೆ ದಾರಿ ಮಾಡಿಕೊಡಬೇಕು. ಗಲ್ಫ್ ಪ್ರದೇಶದಲ್ಲಿ ಮುಂದುವರಿದಿರುವ ಹಗೆತನ ಮತ್ತು ಉಕ್ರೇನ್‌ನಲ್ಲಿನ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ಅಂತರ್ರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದರು. ಹೆಚ್ಚುತ್ತಿರುವ ಜಾಗತಿಕ ಪೈಪೋಟಿ, ಕುಸಿಯುತ್ತಿರುವ ವಿಶ್ವಾಸ ಮತ್ತು ಹೆಚ್ಚುತ್ತಿರುವ ಅನಿಶ್ಚಿತತೆಯನ್ನು ಎತ್ತಿ ತೋರಿಸಿದ ಅವರು, ಆಹಾರ, ಇಂಧನ, ರಸಗೊಬ್ಬರ ಮತ್ತು ಹಣಕಾಸು ಈ ನಾಲ್ಕು ಬಿಕ್ಕಟ್ಟನ್ನು ಜಾಗತಿಕ ದಕ್ಷಿಣದ ದೇಶಗಳು ಎದುರಿಸುತ್ತಿವೆ ಎಂದು ಎಚ್ಚರಿಸಿದ್ದಾರೆ.

ಭಯೋತ್ಪಾದನೆಯ ಸರಣಿ ಅಪರಾಧಿ: ಪಾಕಿಸ್ತಾನಕ್ಕೆ ಖಡಕ್ ತಿರುಗೇಟು

ಭಯೋತ್ಪಾದನೆಯು ಜಾಗತಿಕ ಶಾಂತಿಗೆ ನಿರಂತರ ಬೆದರಿಕೆಯಾಗಿದೆ ಮತ್ತು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯು ಅಂತಾರಾಷ್ಟ್ರೀಯ ವ್ಯವಸ್ಥೆಗೆ ನೇರ ಸವಾಲಾಗಿದೆ ಎಂದು ಹೇಳಿದ ಜೈಶಂಕರ್, ಭಯೋತ್ಪಾದನೆಯನ್ನು ನಿರಂತರವಾಗಿ ಅಭ್ಯಾಸ ಮಾಡುವ ದೇಶವೊಂದು ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸಲು ಮತ್ತು ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ಯತ್ನಿಸುತ್ತಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದರು.

ನಿನ್ನೆ, ಭಯೋತ್ಪಾದನೆಯ ಸರಣಿ ಅಪರಾಧಿಯೊಬ್ಬರು ಈ ಸಭೆಯ ಮುಂದೆ ಸತ್ಯವನ್ನು ತಿರುಚಿ ಮಂಡಿಸಿದ್ದಾರೆ. ಭಯೋತ್ಪಾದನೆಯನ್ನು ಸಾಮಾನ್ಯ ಸಂಗತಿ ಎಂಬಂತೆ ಬಿಂಬಿಸಲು ಮತ್ತು ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ವಾದಗಳನ್ನು ಮಂಡಿಸಲಾಯಿತು. ಆದರೆ ಅದು ನಡೆಯುವುದಿಲ್ಲ. ಭಯೋತ್ಪಾದಕ ದಾಳಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಹಕ್ಕನ್ನು ಬಳಸಿಕೊಳ್ಳಲಾಗುವುದು ಮತ್ತು ಸ್ನೇಹ ಹಾಗೂ ಸೌಹಾರ್ದತೆಯು ಭಯೋತ್ಪಾದನೆಯೊಂದಿಗೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries