ಬದಿಯಡ್ಕ: ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತುಳುವೆರೆ ಆಯೊನೊ ಕೂಟ ಬದಿಯಡ್ಕದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅಭಿನಂದನೆ ಸಲ್ಲಿಸಿದ್ದಾರೆ. ಕಾಸರಗೋಡು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ, ಪ್ರಧಾನವಾಗಿ ದೈವಾರಾಧನೆಯಲ್ಲಿ ದೈವಗಳು ಅನುಗ್ರಹ ನೀಡುವ ಹಾಗೂ ಆಚಾರ ವಿಚಾರ ಸಂಸ್ಕøತಿಯಲ್ಲಿ ಮಹತ್ತರವಾದ ವೈಶಿಷ್ಟ್ಯ ಹೊಂದಿರುವ ತುಳು ಭಾಷೆಗೆ ಎರಡನೇ ಸ್ಥಾನಮಾನ ನೀಡಬೇಕೆಂದು ಕಳೆದ ವರ್ಷ ಮಧೂರು ದೇವಸ್ಥಾನದ ಬ್ರಹ್ಮಕಲಶದ ಮೂಡಪ್ಪಸೇವೆಯ ದಿನದ ಧಾರ್ಮಿಕ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಅಂದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿತ್ತು. ಅಂದಿನ ಪ್ರಧಾನ ವೇದಿಕೆಯಲ್ಲಿ ಪೇಜಾವರ ಶ್ರೀಗಳು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್ ಹಾಗೂ ಗಣ್ಯರು ಬೆಂಬಲ ಸೂಚಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಬಹುದಾಗಿದೆ.

