HEALTH TIPS

ಮೂಲಭೂತ ಸೌಕರ್ಯಗಳಿಲ್ಲದೆ ತೆರೆಯಲಿರುವ ಚಾಲಿಂಗಲ್ ಟೋಲ್ ಪ್ಲಾಜಾ: ಸ್ಥಳೀಯರಿಂದ ತೀವ್ರ ಪ್ರತಿಭಟನೆ: ಕ್ರಿಯಾಸಮಿತಿ ನೇತೃತ್ವದಲ್ಲಿ ಹೋರಾಟಕ್ಕೆ ರೂಪು

ಕಾಸರಗೋಡು: ಅಭಿವೃದ್ಧಿ ಬೇಕು, ಟೋಲ್ ಗಳೂ ಇರಲಿ... ಆದರೆ ಜನರ ಸಂಕಷ್ಟಕ್ಕೆ ಪರಿಹಾರ ಕಂಡರೆ ಸಾಕು ಎಂದು ಸ್ಥಳೀಯರು ನಿರ್ಧರಿಸಿದರೆ ಅದೇ ನಡೆಯುತ್ತದೆ. ಮೂಲಭೂತ ಸೌಕರ್ಯಗಳಿಲ್ಲದೆ ಚಾಲಿಂಗಾಲ್ ಟೋಲ್ ಪ್ಲಾಸ್ ಮೊದಲೇ ತೆರೆಯುವುದರ ವಿರುದ್ಧ ಜನರ ಅಭಿಪ್ರಾಯ ಇದಾಗಿದೆ. 


ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪನಿ ಮಾನವೀಯತೆ ಲವಲೇಶ ಇಲ್ಲದೆ ಟೋಲ್ ಸಂಗ್ರಹಿಸುವುದಕ್ಕಷ್ಟೇ ಲಕ್ಷ್ಯವಿರಿಸಿದೆ ಎಂಬ ಪ್ರಮುಖ ಆಕ್ಷೇಪಣೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಏನಾದರೂ ಮಾಡಿ ಹಣ ಸಂಗ್ರಹಿಸುವುದ ಮೇಲೆ ಮಾತ್ರ ಕೇಂದ್ರೀಕರಿಸಿರುವ ಚಿಂತನೆಯನ್ನು ವಿರೋಧಿಸಿ ಇದೀಗ ಜನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿದೆ.

ಸಂಕಟಮಯವಾದ ಪ್ರಯಾಣ: 

ಪ್ರದೇಶದ ಸೇವಾ ರಸ್ತೆಯನ್ನು ಸಮರ್ಪಕವಾಗಿ ಮಾಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಇತರೆ ಕೆಲಸಗಳನ್ನು ಪೂರ್ಣಗೊಳಿಸದೆಯೇ ಟೋಲ್ ಗೇಟ್ ತೆರೆಯಲು ಪ್ರಯತ್ನಿಸಲಾಗುತ್ತಿದೆ. ಮಳೆ ನೀರು ಹರಿದು ಹೋಗಲು ಚರಂಡಿಗಳಿಲ್ಲದಿರುವುದರಿಂದ  ಹೆದ್ದಾರಿಯಲ್ಲಿನ ಮಳೆನೀರು ಪಕ್ಕದ ಸರ್ವೀಸ್ ರಸ್ತೆಯನ್ನು ಮುಳುಗಿಸಿ ದೊಡ್ಡ ಪ್ರವಾಹಕ್ಕೆ ಕಾರಣವಾಗುತ್ತಿದೆ. ಇಂತಹ ಅಪಸವ್ಯಗಳ ಮಧ್ಯೆ ಟೋಲ್ ಸಂಗ್ರಹಿಸಲು ಮುಂದಾಗಿರುವುದು ಹೆದ್ಧಾರಿ ಪ್ರಾಧಿಕಾರದ ಕುತ್ಸಿತ ಮನೋಸ್ಥಿತಿಯಾಗಿದ್ದು ಅನುಮತಿಸಲಾUಗದು ಎಂದು ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಅಗತ್ಯವನ್ನು ಮುಂದಿಟ್ಟು ಸ್ಥಳೀಯರು ಮೊದಲೇ ಹೋರಾಟಕ್ಕೆ ಇಳಿದಿದ್ದರು. ಇದರ ಭಾಗವಾಗಿ ಬುಧವಾರ (ಸೆಪ್ಟೆಂಬರ್ 2) ಬೆಳಿಗ್ಗೆ 10.30-ಕ್ಕೆ ಟೋಲ್ ಪ್ಲಾಜಾಕ್ಕೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಉದುಮ ಶಾಸಕ ಕೆ. ನೀಲಕಂಠನ್ ಪ್ರತಿಭಟನೆಯನ್ನು ಉದ್ಘಾಟಿಸುಚವರು. 

ಆರಿಕ್ಕಾಡಿ ಪುನರಾರ್ವಿಸುವುದೇ?

ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿ-ಚೆಂಗಳ ರೀಚಿನ 22 ಕಿಲೋಮೀಟರ್‍ಗಳಲ್ಲಿ ಮತ್ತೊಂದು ಟೋಲ್ ಆರಂಭಿಸಲು ಮುಂದಾದ ಕ್ರಮಗಳ ವಿರುದ್ಧ ಕುಂಬಳೆ ಆರಿಕ್ಕಾಡಿಯಲ್ಲಿ ಜನರು ಸಂಘಟಿತರಾಗಿ ಚಳವಳಿ ನಡೆಸಿದ್ದು ಇತ್ತೀಚಿನ ಇತಿಹಾಸ. ಜನರ ಆಕ್ರೋಶಕ್ಕೆ ಮಣಿದು ಬಳಿಕ ಈ ಟೋಲ್ ಆರಂಭಗೊಂಡು ಎರಡು ವಾರಗಳಲ್ಲಿ ಸಂಪೂರ್ಣ ನಿಲುಗಡೆಗೊಳಿಸಲಾಗಿತ್ತು. ಇದೀಗ ಚಾಲಿಂಗಲ್ ನಲ್ಲಿ ಇದೇ ರೀತಿಯ ಪ್ರತಿಭಟನೆ ವ್ಯಕ್ತವಾಗಿರುವುದು ನ್ಯಾಯಯುತ. ಇದಕ್ಕಾಗಿ ಕ್ರಿಯಾ ಸಮಿತಿ ರೂಪುಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಕಾರ್ಯಗಳು ಪೂರ್ಣಗೊಳ್ಳದೆ ಟೋಲ್ಗೇಟ್ ತೆರೆಯಲು ಮುಂದಾಗಿರುವುದು ಯಾವ ಸೀಮೆಯ ನ್ಯಾಯ ಎಂಬ ಪ್ರಶ್ನೆಗಳ ಮಧ್ಯೆ ಇದೀಗ ಅನಿಶ್ಚಿತಕಾಲದ ಹೋರಾಟವನ್ನು ಆಯೋಜಿಸಲು ನಿರ್ಧಾರ ತೆಗೆದುಕೊಳ್ಳಲು ಕ್ರಿಯಾಸಮಿತಿ ಮುಂದಾಗಿದೆ. ಎರಡು ತಿಂಗಳ ಹಿಂದೆ ಪುಲ್ಲೂರು-ಪೆರಿಯ ಪಂಚಾಯತ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಟೋಲ್ ಗೇಟಿನ ಮುಂದೆ ಸೂಚನಾ ಹೋರಾಟ ಆಯೋಜಿಸಲಾಗಿತ್ತು. ಇದಕ್ಕೆ ಸ್ಥಳೀಯರಿಂದ ದೊಡ್ಡ ಬೆಂಬಲ ಲಭ್ಯವಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries