HEALTH TIPS

ಸಾಲಪಡೆದ ಹಣಕಾಸು ಸಂಸ್ಥೆಯಿಂದ ಪಾರಾಗಲು ನಕಲಿ ನಂಬರ್ ಪ್ಲೇಟ್: ಸಮಾನ ನೋಂದವಣಾ ಸಂಖ್ಯೆಯ ಎರಡು ವಾಹನ ವಶಪಡಿಸಿದ ಪೊಲೀಸರು

ಕಾಸರಗೋಡು: ಸಮಾನ ನೋಂದಾವಣಾ ಸಂಖ್ಯೆ ಅಳವಡಿಸಿ ಸುತ್ತಾಡುತ್ತಿದ್ದ ಎರಡು ವಾಹನಗಳನ್ನು ಮಂಜೇಶ್ವರ ಠಾಣೆ ಪೊಲೀಸರು ವಶಶಪಡಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಸಮಾನ ನೋಂದಾವಣಾ ಸಂಖ್ಯೆಹೊಂದಿದ ಎರಡು ಥಾರ್ ವಾಹನಗಳು ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ವಾಹನದ ನೋಂದಾವಣಾ ಸಂಖ್ಯೆ ಹೊಂದಿರುವ ಯಥಾರ್ಥ ಮಾಲಿಕ ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಎಂಬುದು ತಿಳಿದು ಬಂದಿದೆ. ನಕಲಿಯಾಗಿ ನಂಬರ್ ದಾಖಲಿಸಿಕೊಂಡಿರುವ ವ್ಯಕ್ತಿ ಬೇಳ ನಿವಾಸಿಯಾಗಿದ್ದು, ಈತನಿಗೆ ನೋಟೀಸು ನೀಡಿದರೂ ಠಾಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ

ಬೇಳ ನಿವಾಸಿಯ ವಾಹನ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಹೊಂದಿದ್ದು, ಹಣಕಾಸು ಸಂಸ್ಥೆಯವರು ವಾಹನ ಮುಟ್ಟುಗೋಲು ಹಾಕದಿರುವಂತೆ ಮಾಡಲು ನಕಲಿ ನಂಬರ್‍ಪ್ಲೇಟ್ ಅಳವಡಿಸಿರುವುದು ಪೊಲೀಸರು ನಡೆಸಿದ ತನಿಖೆಯಿಂದ ವ್ಯಕ್ತವಾಗಿದೆ. 

ಇದೇ ಸಂದರ್ಭ ನಕಲಿ ನಂಬರ್ ಅಳವಡಿಸಿದ ವಾಹನವನ್ನು ಯಾವುದಾದರೂ ಕಾನೂನು ವಿರುದ್ಧ ಚಟುವಟಿಕೆಗೆ ಬಳಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆಯೆಂದು ಪೆÇಲೀಸರು ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries