ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ರಂಗಸಂಕಲ್ಪದೊಂದಿಗೆ 'ಗದಾಯುದ್ಧ'ಪ್ರಸಂಗ ಪ್ರದರ್ಶನಗೊಂಡಿತು.
ಗದಾಪ್ರಹಾರದ ಪ್ರತಿಯೊಂದು ಸೂಕ್ಷ್ಮ ನಡೆಗಳನ್ನು, ಶಾಸ್ತ್ರೀಯ ಯುದ್ಧನಿಯಮಗಳನ್ನು ಕಾಲಮಿತಿಯ ಗೆರೆಯೊಳಗೇ ಬಂಧಿಸಿ, ಅದ್ಭುತ ಅಭಿನಯದ ಮೂಲಕ ಶಂಭಯ್ಯ ಕಂಜರ್ಪಣೆ, ಶ್ರುತಕೀರ್ತಿ ರಾಜ್ ಉಜಿರೆ ಸೇರಿದಂತೆ ಹಿರಿಯ ಕಲಾವಿದರ ಅದ್ಭುತ ಪ್ರದರ್ಶನ ಪ್ರೇಕ್ಷಕರ ಗಮನಸೆಳೆಯಿತು. ಪ್ರತಿಷ್ಠಾನದ ಅದ್ಯಕ್ಷ, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಅವರ ದೂರದೃಷ್ಟಿ ಮತ್ತು ರಂಗಜ್ಞಾನ ಹಾಗೂ ಹಿಮ್ಮೇಳದ ಸಮರ್ಥ ಕಲಾವಿದರ ನಾದವೈಭವವು ರಂಗಸ್ಥಳಕ್ಕೆ ಜೀವಕಳೆ ತುಂಬಿತು.


