ಕಾಸರಗೋಡು: ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಅವರ 'ಬೆಟ್ಟದ ಬುಡದಲ್ಲಿರುವ ಬಂಡಿ' ಕವನ ಸಂಕಲನದ ಬಿಡುಗಡೆ, ಕಾವ್ಯ ಚಿಂತನ ಮತ್ತು ಕವಿ- ಕಾವ್ಯ ಮಿಲನ ಕಾರ್ಯಕ್ರಮ ಸೆ. 21ರಂದು ಮಧ್ಯಾಹ್ನ 3ಕ್ಕೆ ಎಡನೀರು ಮಠದಲ್ಲಿ ನಡೆಯುವುದು.
ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು 'ಬೆಟ್ಟದ ಬುಡದಲ್ಲಿರುವ ಬಂಡಿ' ಕವನ ಸಂಕಲನವನ್ನು ಬಿಡುಗಡೆಗೊಳಿಸಿ, ಆಶೀರ್ವಚನ ನೀಡುವರು. ಖ್ಯಾತ ಸಾಹಿತಿ ಡಾ. ಪ್ರಮೀಳಾ ಮಾಧವ್ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ, ಸಾಹಿತಿ ಡಾ. ಧನಂಜಯ ಕುಂಬ್ಳೆ ಕೃತಿ ಪರಿಚಯ ಮಾಡುವರು. ಡಾ.ರಮಾನಂದ ಬನಾರಿ ಕೃತಿಕಾರರ ನುಡಿಗಳನ್ನಾಡುವರು.
ಕಾವ್ಯ ಚಿಂತನ ಕಾರ್ಯಕ್ರಮವನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ಉದ್ಘಾಟಿಸುವರು. ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮತ್ತು ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಡಾ.ಬನಾರಿಯವರ ಕವನಗಳ ಕುರಿತು ಮಾತನಾಡುವರು.
ಬಳಿಕ ನಡೆಯುವ ' ಕವಿ- ಕಾವ್ಯ ಮಿಲನ'ದಲ್ಲಿ ಡಾ.ಮಹೇಶ್ವರಿ.ಯು, ಬಾಲ ಮಧುರಕಾನನ, ಟಿ.ಎ.ಎನ್ ಖಂಡಿಗೆ, ಪ್ರಮೀಳಾ ಚುಳ್ಳಿಕ್ಕಾನ, ಲಕ್ಷ್ಮಿ.ವಿ.ಭಟ್, ಸತ್ಯವತಿ ಎಸ್ ಭಟ್ ಕೊಳಚಪ್ಪು, ಡಾ. ಗೋವಿಂದ ಭಟ್ ಕೊಳ್ಚಪ್ಪೆ, ಡಾ. ಬಾಲಕೃಷ್ಣ ಹೊಸಂಗಡಿ, ಜ್ಯೋತ್ಸ್ನಾ ಕಡಂದೇಲು, ಕವಿತಾ ಕೂಡ್ಲು, ವಿಜಯಲಕ್ಷ್ಮಿ ಶಾನುಭೋಗ್, ಶಶಿಕಲಾ ಟೀಚರ್, ಸ್ನೇಹಲತಾ ದಿವಾಕರ್, ಸುಭಾಷ್ ಪೆರ್ಲ, ಪೆÇ್ರ. ಎ. ಶ್ರೀನಾಥ್, ವೆಂಕಟ್ ಭಟ್ ಎಡನೀರು, ಪಾರ್ವತಿ ದಿನೇಶ್ ತಂಬಿಲ ಕೋಡಿ ಕವನವಾಚನ ಮಾಡುವರು.

