HEALTH TIPS

ಮಾಜಿ ಶಾಸಕರ ಕೈಯಿಂದ ಸೇತುವೆ ಉದ್ಘಾಟಿಸಿದ ಶಾಸಕ: ರಾಜಕಾರಣಿಗಳಿಗೆ ಮಾದರಿ

ಕೊಟ್ಟಯಂ: ಒಂದೊಳ್ಳೆ ಬೆಳವಣಿಗೆಯಲ್ಲಿ ಶಾಸಕರೊಬ್ಬರು, ವಿರೋಧ ಪಕ್ಷದ ಮಾಜಿ ಶಾಸಕರನ್ನು ಕರೆ ತಂದು, ಸೇತುವೆ ಉದ್ಘಾಟನೆ ಮಾಡಿಸಿರುವ ಘಟನೆ ಕೇರಳಂನಲ್ಲಿ ನಡೆದಿದೆ. 


ಕೊಟ್ಟಯಂ ಜಿಲ್ಲೆಯಲ್ಲಿ ನಡೆದ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ, ಪೂಜಾರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಜೆ. ಸೆಬಾಸ್ಟಿಯನ್, ಪಕ್ಕಕ್ಕೆ ಸರಿದು, ಅಲ್ಲಿಯೇ ಇದ್ದ ಮಾಜಿ ಶಾಸಕ, ಸಿಪಿಎಂನ ಸೆಬಾಸ್ಟಿಯನ್ ಕುಲಥುಂಕಲ್ ಅವರಿಂದ ಉದ್ಘಾಟನೆ ಮಾಡಿಸಿದ್ದಾರೆ. 

ಕಳೆದ ಬಾರಿ ಪೂಜಾರ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಕುಲಥುಂಕಲ್ ಅವರು, ಎರ್ನಾಕುಲಂ-ಅಮಕುನ್ನು ಸೇತುವೆಗೆ ₹80 ಲಕ್ಷ ಹಣವನ್ನು ತಮ್ಮ ಶಾಸಕರ ನಿಧಿಯಿಂದ ಮಂಜೂರು ಮಾಡಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕುಲಥುಂಕಲ್ ಅವರು ಸೋತು ಕಾಂಗ್ರೆಸ್‌ನ ಸೆಬಾಸ್ಟಿಯನ್ ಆಯ್ಕೆಯಾಗಿದ್ದಾರೆ.

ಈಗ ಸೇತುವೆ ಕಾಮಗಾರಿ ಮುಗಿದು ಉದ್ಘಾಟನೆಯಾಗಿದೆ. ಆದರೆ, ಮಾಜಿ ಶಾಸಕರ ಕೊಡುಗೆಯನ್ನು ಸ್ಮರಿಸಿದ ಹಾಲಿ ಶಾಸಕ, ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ.

ಈ ಭಾಗದ ಜನರ ಹಲವು ದಿನಗಳ ಕನಸುಸೇತುವೆ ಮೂಲಕ ಈಡೇರಿದೆ. ಈ ಸೇತುವೆ ನಿರ್ಮಿಸಿದ ಸಂಪೂರ್ಣ ಶ್ರೇಯ ಮಾಜಿ ಶಾಸಕರಿಗೆ ಹೋಗಬೇಕು. ಅವರು ಅನುದಾನ ಒದಗಿಸದೇ ಇದ್ದಿದ್ದರೆ ಈ ಕೆಲಸ ಆಗುತ್ತಿರಲಿಲ್ಲ. ಉದ್ಘಾಟನೆಯೂ ಅವರೇ ಮಾಡಬೇಕು ಎಂದು ಶಾಸಕ ಎಂ.ಜೆ. ಸೆಬಾಸ್ಟಿಯನ್ ಹೇಳಿದ್ದರು. ಅದರಂತೆ, ಇಂದು ಅವರ ಕೈಯಿಂದಲೇ ಉದ್ಘಾಟನೆ ಮಾಡಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries