HEALTH TIPS

ಭಾರತದ ಗುರಿ 'ವಿಶ್ವಗುರು' ಆಗುವುದು, 'ಮಹಾಶಕ್ತಿ' ಅಲ್ಲ: ಮೋಹನ್ ಭಾಗವತ್‌

ವಾಷಿಂಗ್ಟನ್:ಭಾರತದ ಸಂಸ್ಕೃತಿ, ಪದ್ಧತಿಯು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಗುಣಗಳಿಂದ 'ವಿಶ್ವ ಗುರು' ಆಗಿ ಗುರುತಿಸಿಕೊಂಡಿದೆ ಹೊರತು, ಪ್ರಪಂಚದ ಮೇಲೆ ತನ್ನ ಅಧಿಕಾರ ತೋರಿಸುವ 'ಮಹಾಶಕ್ತಿ' ಆಗಿ ಗುರುತಿಸಿಕೊಂಡಿಲ್ಲ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.


ಟೊರೆಂಟೊದಲ್ಲಿ ಕೆನಾಡದ ಹಿಂದೂ ಸಂಘನೆಗಳು ಆಯೋಜಿಸಿದ 'ಹಿಂದೂ ವಿಶ್ವ ಬಂಧು - ಜಗತ್ತನ್ನು ಸ್ನೇಹದಿಂದ ಅಪ್ಪಿಕೊಳ್ಳಿ' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 'ನಮ್ಮ ಸಂಸ್ಕೃತಿಯು ಯಾವುದೇ ಒಂದು ದೇಶ, ಮತ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ. ಅದು ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಭಾವಿಸುತ್ತದೆ' ಎಂದಿದ್ದಾರೆ.

ಪ್ರಪಂಚದ ಯಾವುದೇ ಮೂಲೆಯಿಂದಲೂ ಭಾರತದಿಂದ ಸಹಾಯ ಕೇಳಿದಾಗಲೆಲ್ಲಾ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದೆ. ಸಹಾಯ ಮಾಡುವ ಗುಣವು ಭಾರತದ ಡಿಎನ್‌ಎನಲ್ಲಿಯೇ ಇದೆ' ಎಂದು ಹೇಳಿದ್ದಾರೆ.

ಸಂತ ಕಬೀರ ದಾಸರ ಸಾಲುಗಳನ್ನು ಉಲ್ಲೇಖಿಸಿದ ಅವರು, 'ಒಬ್ಬ ವ್ಯಕ್ತಿಯು ಎಷ್ಟೇ ಗ್ರಂಥಗಳನ್ನು ಓದಿ ಪಂಡಿತನಾಗಿದ್ದರೂ ಅವನಿಗೆ 'ಪ್ರೀತಿ' ಬಗ್ಗೆ ಅರಿವಿಲ್ಲದಿದ್ದರೆ ಆ ಜ್ಞಾನಕ್ಕೆ ಯಾವುದೇ ಬೆಲೆ ಇರುವುದಿಲ್ಲ' ಎಂದಿದ್ದಾರೆ.

ನಾವೆಲ್ಲರೂ ಒಂದೆ. ಹಾಗೆಯೇ ಬದುಕಬೇಕು. ವೈವಿಧ್ಯತೆಯಲ್ಲಿ ಏಕತೆ ಎಂಬ ಧೇಯವನ್ನು ಮನಸಾರೆ ಒಪ್ಪಿಕೊಳ್ಳಬೇಕು. ಜ್ಞಾನವುಳ್ಳವರು ವಸುಧೈವ ಕುಟುಂಬದ ಧೇಯವನ್ನು ಸ್ವೀಕರಿಸುತ್ತಾರೆ' ಎಂದು ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries