ಮಂಜೇಶ್ವರ: ಆಡಳಿತಾತ್ಮಕ ಸೌಲಭ್ಯಕ್ಕಾಗಿ ಮಂಜೇಶ್ವರ ತಾಲೂಕಿನ ಉಪ್ಪಳ, ಇಚ್ಲಂಗೋಡು ಹಾಗೂ ಕೊಯಿಪ್ಪಾಡಿ ಗ್ರೂಪ್ ವಿಲೇಜ್‍ಗಳನ್ನು ವಿಭಜಿಸಬೇಕೆಂದು ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿದೆ.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೈಪುಲ್ಲ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂರೇಖಾ ತಹಸೀಲ್ದಾರ್ ಪಿ. ಸಜಿತ್ ಸ್ವಾಗತಿಸಿ, ಜೂನಿಯರ್ ಸೂಪರಿಂಟೆಂಡೆಂಟ್ ಬಿ. ಅಜಿತ್ ಕುಮಾರ್ ವಂದಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ, ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ ಜೆ.ಎಸ್. ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

