ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸ್‍ರ ಚರ್ಚಿನಲ್ಲಿ ವಾರ್ಷಿಕ ಹೊಸ ತೆನೆ ಹಬ್ಬ ಆಚರಣೆ ನಡೆಯಿತು.
ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನವಾದ ಮೋಂತಿ ಫೆಸ್ತ್ ನ್ನು ಕ್ರೈಸ್ತರ ಸಾಂಸ್ಕøತಿಕ ಹಾಗೂ ಧಾರ್ಮಿಕ ಬದುಕಿನೊಂದಿಗೆ ಬೆಸೆದು ಆಚರಿಸಲಾಗುತ್ತದೆ. ಮಳೆಗಾಲದ ಬಳಿಕ ಹೊಲಗಳಲ್ಲಿ ಬೆಳೆಯುವ ಹೊಸ ಭತ್ತದ ತೆನೆಗಳನ್ನು ದೇವಾಲಯಕ್ಕೆ ತಂದು ಆಶೀರ್ವದಿಸಿ, ನಂತರ ಕುಟುಂಬದವರು ಅದನ್ನು ಮನೆಗೆ ಕೊಂಡೊಯ್ಯುತ್ತಾರೆ.
ಹೊಸ ತೆನೆ, ಹಸಿರು ಎಲೆಗಳು ಹಾಗೂ ಹೂವುಗಳಿಂದ ಅಲಂಕರಿಸಲಾದ ಮೆರವಣಿಗೆಯಲ್ಲಿ ಮಕ್ಕಳು ಪ್ರಮುಖ ಆಕರ್ಷಣೆಯಾಗಿದ್ದು ಚರ್ಚ್‍ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಬಲಿಪೂಜೆ ನಡೆಯಿತು. ಕನ್ಯಾಮರಿಯಮ್ಮನಿಗೆ ಗೌರವ ಸಲ್ಲಿಸಿ, ಕುಟುಂಬದ ಸುಖ-ಸಮೃದ್ಧಿ, ಉತ್ತಮ ಬೆಳೆ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಚರ್ಚಿನ ಧರ್ಮಗುರು ರೇ.ಫಾ.ನೇಲ್ಸನ್ ಡಿ ಆಲ್ಮೇಡಾ ಧಾರ್ಮಿಕ ವಿಧಿವಿಧಾನಗಳಿಗೆ ನೇತೃತ್ವ ನೀಡಿದರು.ಚರ್ಚಿನ ಪಾಲನ ಸಮಿತಿ ಪದಾಧಿಕಾರಿಗಳು, ವಾಳೆಯ ಗುರಿಕ್ಕಾರರು ಹಾಗೂ ಇಗರ್ಜಿ ಸಂಬಂಧಿತ ವಿವಿಧ ಪ್ರಮುಖರು ಭಾಗವಹಿಸಿದ್ದರು.

.jpg)
.jpg)
