HEALTH TIPS

ಭಯೋತ್ಪಾದನೆಗೆ ಕುಮ್ಮಕ್ಕು; ಸಿಂಧೂ ನದಿ ವಿಚಾರ ಎತ್ತಿದ ಪಾಕ್‌ಗೆ ಮೋದಿ ತಿರುಗೇಟು

ನವದೆಹಲಿ: ಭಯೋತ್ಪಾದನೆ ಎಂದಿಗೂ ಯಾವ ದೇಶಕ್ಕೂ ಕಾರ್ಯತಂತ್ರದ ಆಸ್ತಿಯಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಿರ್ಗಿಸ್ತಾನ್‌ನಲ್ಲಿ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಘಟನೆಯ 26ನೇ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಜರದ್ದ ಸಭೆಯಲ್ಲೇ ವಾಗ್ದಾಳಿ ನಡೆಸಿದ್ದಾರೆ.


ಪಹಲ್ಗಾಮ್ ದಾಳಿ ಬಳಿಕ ಸಿಂಧೂ ನದಿ ನೀರಿಗೆ ತಡೆಹಾಕಿದ ಭಾರತದ ವಿರುದ್ಧ ಶೆಹಬಾಸ್ ಷರೀಫ್ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಿಸಿದ ಮೋದಿ, 'ಭಯೋತ್ಪಾದನೆಯು ಮಾನವತೆಗೆ ಗಂಭೀರ ಸವಾಲಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಕೇವಲ ಕ್ರಿಯೆ-ಪ್ರತಿಕ್ರಿಯೆ ಧೋರಣೆಗೆ ಅಂಟಿಕೊಂಡು ಕೂರಬಾರದು' ಎಂದಿದ್ದಾರೆ.

ಭಯೋತ್ಪಾದಕರಿಗೆ ಹಣಕಾಸು ನೆರವು, ನೇಮಕ, ಪ್ರತ್ಯೇಕತಾವಾದಿ ಚಿಂತನೆಗೆ ಪ್ರಚೋದನೆ ಹಾಗೂಸುರಕ್ಷಿತ ನೆಲೆ ಒದಗಿಸುವ ವ್ಯವಸ್ಥೆಯನ್ನು ನಾಶ ಮಾಡಬೇಕು. ಒಕ್ಕೊರಲಿನಿಂದ ಮುಂದುವರಿಯಬೇಕು ಎಂದಿದ್ದಾರೆ.

ಭಯೋತ್ಪಾದನೆಯನ್ನು ದೇಶದ ನೀತಿಯ ಸಾಧನವಾಗಿ ಬಳಸುವ, ಭಯೋತ್ಪಾದಕರಿಗೆ ಸುರಕ್ಷಿತ ನೆಲೆ ಹಾಗೂ ಬೆಂಬಲ ನೀಡುವ ದೇಶಗಳಿಗೆ ಬಲವಾದ ಸಂದೇಶ ರವಾನಿಸಬೇಕು. ಭಯೋತ್ಪಾದನೆ ಎಂದಿಗೂ ಕಾರ್ಯತಂತ್ರದ ಆಸ್ತಿ ಆಗಲು ಸಾಧ್ಯವಿಲ್ಲ'ಎಂದಿದ್ದಾರೆ.

ಇದೇವೇಳೆ, ಪಾಕ್ ವಿರುದ್ಧ ಭಯೋತ್ಪಾದನೆ ಪ್ರಚೋದಿಸಲು ಭಾರತ ಅಫ್ಗಾನಿಸ್ತಾನ ನೆಲೆಯಲ್ಲಿ ಬಳಸುತ್ತಿದೆ ಎಂದು ಪಾಕ್ ಪ್ರಧಾನಿ ಆರೋಪಿಸಿದರು. ಅಲ್ಲದೇ, ಒತ್ತಡ ಹೇರಲು ರಾಜಕೀಯ ಸಾಧನವಾಗಿ ಜಲ ಒಪ್ಪಂದ ಬಳಸಲಾಗುತ್ತಿದೆ ಎಂದು ಸಿಂಧು ನದಿ ವಿಚಾರವನ್ನು ಷರೀಫ್ ಪ್ರಸ್ತಾಪಿಸಿ, ಇದು ಸ್ವೀಕಾರಾರ್ಹವಲ್ಲ ಎಂದಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries