HEALTH TIPS

"ಕಾನೂನು ನಿರ್ಬಂಧದ ಕಾರಣ ಬ್ರಿಟನ್ ತೊರೆಯಲು ಸಾಧ್ಯವಿಲ್ಲ": ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬ ಹಣೆಪಟ್ಟಿ ತಿರಸ್ಕರಿಸಿದ ವಿಜಯ್ ಮಲ್ಯ

ಲಂಡನ್: ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಉದ್ಯಮಿ ವಿಜಯ್ ಮಲ್ಯ ಅವರು ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದು, ಕಾನೂನುಬದ್ಧ ನಿರ್ಬಂಧದ ಕಾರಣದಿಂದಾಗಿ ನಾನು ಬ್ರಿಟನ್ ತೊರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ಈ ಕುರಿತು ಎಕ್ಸ್'ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ವಿಜಯ್ ಮಲ್ಯ, ಭಾರತ ಸರಕಾರವು ನನಗೆ ತೀವ್ರ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 2025 ರಲ್ಲಿ, ಹಣಕಾಸು ಸಚಿವ ಪಂಕಜ್ ಚೌಧರಿ ಅವರು 2018 ರ ಎಫ್‌ಇಒಎ ಅಡಿಯಲ್ಲಿ ಒಟ್ಟು 15 ವ್ಯಕ್ತಿಗಳನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ (ಪರಾರಿಯಾದ ಆರ್ಥಿಕ ಅಪರಾಧಿಗಳು) ಎಂದು ಘೋಷಿಸಲಾಗಿದೆ ಎಂದು ಲೋಕಸಭೆಗೆ ತಿಳಿಸಿದ್ದರು. ಈ ಪಟ್ಟಿಯಲ್ಲಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಹಲವು ಪ್ರಮುಖ ಹೆಸರುಗಳಿವೆ ಎಂದು ಅವರು ತಿಳಿಸಿದ್ದರು.

ಆದರೆ, ಭಾರತಕ್ಕೆ ಪ್ರಯಾಣಿಸುವುದಕ್ಕೆ ಇರುವ ಕಾನೂನುಬದ್ಧ ನಿರ್ಬಂಧದ ಕಾರಣದಿಂದಲೇ ನಾನು ಯುಕೆಯಲ್ಲಿ ನೆಲೆಸಿದ್ದೇನೆ ಎಂದು ಮಲ್ಯ ಹೇಳಿಕೊಂಡಿದ್ದಾರೆ.

"ನಾನು ಭಾರತಕ್ಕೆ ಬರಲು ನಿರಾಕರಿಸುತ್ತಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಹೇಳುವ ಎಲ್ಲರೂ, ನಾನು 1992ರಿಂದ ಬ್ರಿಟನ್‌ನ ಶಾಶ್ವತ ನಿವಾಸಿಯಾಗಿದ್ದೇನೆ ಮತ್ತು ಪ್ರಸ್ತುತ ಕಾನೂನುಬದ್ಧವಾಗಿ ಈ ದೇಶವನ್ನು ತೊರೆಯಲು ನಿರ್ಬಂಧಿಸಲಾಗಿದೆ ಎಂಬುದನ್ನು ಗಮನಿಸಿ. ನನ್ನ ಪ್ರಕರಣದಲ್ಲಿ ಭಾರತ ಸರಕಾರ ತೀವ್ರ ಅನ್ಯಾಯ ಮಾಡಿದೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪರಾರಿಯಾಗಿರುವ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ಮರಳಿ ಕರೆ ತಂದು ವಿಚಾರಣೆಯನ್ನು ಎದುರಿಸುವಂತೆ ಮಾಡಲು ಸರಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ಡಿಸೆಂಬರ್‌ನಲ್ಲಿ ತಿಳಿಸಿತ್ತು.

ಹಿಂದಿನ ಪೋಸ್ಟ್‌ನಲ್ಲಿ ಮಲ್ಯ ಅವರು ಅಫಿಡವಿಟ್‌ನ ಒಂದು ಭಾಗವನ್ನು ಉಲ್ಲೇಖಿಸಿದ್ದರು. ಜಾರಿ ನಿರ್ದೇಶನಾಲಯ (ED) ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದೆ ಎಂದು ಅವರು ಹೇಳಿರುವ ಈ ಅಫಿಡವಿಟ್‌ನಲ್ಲಿ 2021ರಲ್ಲಿ 14,131.60 ಕೋಟಿ ವಸೂಲಿ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಐದು ವರ್ಷಗಳು ಕಳೆದರೂ ನಾನು ಇನ್ನೂ ಬ್ಯಾಂಕ್ಗಳಿಗೆ ವಂಚನೆ ಮಾಡಿದ ವಂಚಕ ಎಂದು ಕರೆಯಲ್ಪಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಮಲ್ಯ ಅವರು ವಸೂಲಾತಿಗೆ ಸಂಬಂಧಿಸಿದ ಖಾತೆಯ ವಿವರ ಎಂದು ಕೋಷ್ಟಕವೊಂದನ್ನೂ ಪೋಸ್ಟ್ ಮಾಡಿದ್ದಾರೆ. ನನ್ನನ್ನು ತಪ್ಪಾಗಿ ಪರಾರಿಯಾದ ಅಪರಾಧಿ ಎಂದು ಗುರುತಿಸಲಾಗಿದೆ ಎಂದು ಆರೋಪಿಸಿದ್ದಾರೆ. ನ್ಯಾಯಸಮ್ಮತ ಮತ್ತು ಸರಿಯಾದ ಲೆಕ್ಕಪತ್ರದ ನ್ಯಾಯವನ್ನು ನಂಬುವ ಎಲ್ಲರೂ ದಯವಿಟ್ಟು ಕೆಳಗಿನ ಕೋಷ್ಟಕವನ್ನು ನೋಡಿ. ಮಾಧ್ಯಮಗಳು ಮತ್ತು ಪತ್ರಕರ್ತರು ವರದಿಯ ಆರಂಭದಲ್ಲೇ ನನ್ನನ್ನು ವಂಚಕ ಎಂದು ಕರೆಯುತ್ತಿದ್ದಾರೆ. ಇದಕ್ಕೆ ನಾನು ಇನ್ನೂ ಅರ್ಹನೇ? ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನನ್ನು ಟೀಕಿಸುವ ಎಲ್ಲರೂ ದಯವಿಟ್ಟು ಸ್ವತಂತ್ರವಾಗಿ ಪರಿಶೀಲಿಸಿ. ನನ್ನ ಹಣದಿಂದ ಕಿಂಗ್ಫಿಶರ್ ಉದ್ಯೋಗಿಗಳಿಗೆ ಪಾವತಿಸಲು ED 350 ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿರುವುದನ್ನು ಗಮನಿಸಿ. ED ನನ್ನ ಆಸ್ತಿಗಳು ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ನನಗೆ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಆಗಸ್ಟ್‌ನಲ್ಲಿ ಮಲ್ಯ ಅವರು ಬ್ಯಾಂಕ್‌ಗಳು ತಮ್ಮಿಂದ ಬಾಕಿ ಹಣವನ್ನು ವಸೂಲಿ ಮಾಡಿಕೊಂಡಿದ್ದರೂ, ತಮಗೆ ಇನ್ನೂ ನ್ಯಾಯ ನಿರಾಕರಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದರು.

'ಎಕ್ಸ್'ನಲ್ಲಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಲ್ಯ, 6,203 ಕೋಟಿ ತೀರ್ಪಿನ ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್‌ಗಳು ಮತ್ತು ಸರಕಾರ ನನ್ನಿಂದ 14,100 ಕೋಟಿ ವಸೂಲಿ ಮಾಡಿರುವುದನ್ನು ಒಪ್ಪಿಕೊಂಡಿವೆ. ಭಾರತೀಯ ಸಾಲ ಪರಿಹಾರ ನ್ಯಾಯವೆಂದರೆ ಇದೇ ಎಂದು ನಾನು ಭಾವಿಸುತ್ತೇನೆ. ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿಲ್ಲ ಎಂದು ಅವರು ಬರೆದಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries