ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿ ತಿರುವಿನಲ್ಲಿ ಅತಿಯಾದ ವೇಗದಿಂದ ಸಂಚರಿಸಿದ ಎರಡು ಕಾರುಗಳು ಲಾರಿಯ ಡೀಸೆಲ್ ಟ್ಯಾಂಕ್‍ಗೆ ಡಿಕ್ಕಿಯಾಗಿದ್ದು, ಲಾರಿ ಚಾಲಕ ಸೇರಿದಂತೆ ಮೂವರು ಗಾಐಗೊಂಡಿದ್ದಾರೆ. ಲಾರಿ ಚಾಲಕ ಜಬ್ಬಾರ್, ಕರುಚಲಾಯಿಸುತ್ತಿದ್ದ ಅಫ್ಸಲ್ ಹಾಗೂ ಅಜ್ಸಲ್ ಗಾಯಾಳುಗಳು. ಗಾಯಾಳುಗಳನ್ನು ಕಾಸರಗೋಡು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿಯ ಆಘಾತಕ್ಕೆ ಲಾರಿಯಿಂಧನ ಟ್ಯಾಂಕ್ ಹಾಗೂ ತೈಲದ ಟ್ಯಾಂಕ್ ಹಾನಿಗೀಡಾಗಿದ್ದು,ರ ಸ್ತೆಯಲ್ಲಿ ವ್ಯಾಪಕವಾಗಿ ತೈಲ ಮತ್ತು ಡೀಸೆಲ್ ಹರಡಿಕೊಂಡಿತ್ತು. ಅಪಘಾತದಿಂದ ನಜ್ಜುಗುಜ್ಜಾಗಿದ್ದ ಕಾರುಗಳನ್ನು ವಿಮಚ್ ಬಳಸಿ ರಸ್ತೆ ಅಂಚಿಗೆ ಸರಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಸ್ತೆಗೆ ಚೆಲ್ಲಿದ್ದ ತೈಲ ಮತ್ತು ಡೀಸೆಲ್ ನೀರು ಬಳಸಿ ಶುಚೀಕರಿಸಿದ ನಂತರ ವಾಹನ ಸಂಚಾರಕ್ಕೆಅನುವುಮಾಡಿಕೊಟ್ಟಿದ್ದಾರೆ. ಭಾನುವಾರ ನಸುಕಿನ 1.45ರ ವೇಳೆಗೆ ಅಪಘಾತ ಸಂಭವಿಸಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



