ತಿರುವನಂತಪುರಂ: ರಾಜ್ಯದಲ್ಲಿ ಇನ್ನು ಮುಂದೆ ವೃದ್ಧಾಶ್ರಮಗಳಿರಲ್ಲ. ವೃದ್ಧಾಶ್ರಮಗಳ ಹೆಸರನ್ನು ಸ್ನೇಹಾಲಯಂ ಎಂದು ಬದಲಾಯಿಸಲಾಗುವುದು. ಸಾಮಾಜಿಕ ನ್ಯಾಯ ಇಲಾಖೆಯು ವೃದ್ಧಾಶ್ರಮಗಳ ಹೆಸರನ್ನು ಬದಲಾಯಿಸಲು ನಿರ್ದೇಶನ ನೀಡಿದೆ.
ಸರ್ಕಾರಿ ಮತ್ತು ಖಾಸಗಿ ವಲಯದ ವೃದ್ಧಾಶ್ರಮಗಳಿಗೆ ಹೆಸರು ಬದಲಾವಣೆ ಅನ್ವಯಿಸುತ್ತದೆ. ಈ ಹಿಂದೆ, ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ನಿರ್ದೇಶನವನ್ನು ನೀಡಿತ್ತು, ಆದರೆ ಅದನ್ನು ಜಾರಿಗೆ ತರಲಾಗಿಲ್ಲ. ಸಾಮಾಜಿಕ ನ್ಯಾಯ ಇಲಾಖೆಯ ಹೊಸ ನಿರ್ದೇಶನವು ಈ ಹೊಸ ಬದಲಾವಣೆ ತರುತ್ತಿದ್ದು, ವ್ಯವಸ್ಥೆಗಳು ಎಷ್ಟರ ಮಟ್ಟಿಗೆ ಸ್ನೇಹಪರವಾಗಿರುತ್ತದೆ ಎಂದು ಕಾದು ನೋಟಬೇಕಿದೆ.

